ಸಿಎಂ ನ ಜನತಾ ದರ್ಶನದಲ್ಲಿ ಪತಿಬೇಕು. com ಚಿತ್ರದ ಆಡಿಯೋ ರಿಲೀಸ್..!?

29 Aug 2018 5:41 PM | Entertainment
363 Report

ಈಗಾಗಲೇ ಶೀತಲ್ ಶೆಟ್ಟಿ ಅಭಿನಯದ ಪತಿಬೇಕು.ಕಾಮ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೆಟ್ ಮಾಡಿದೆ. ಟ್ರೈಲರ್’ನಿಂದಲೇ ಸಿನಿ ರಸಿಕರು ಪತಿಬೇಕು.ಕಾಮ್ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರದ ನಿರ್ದೇಶಕರಿಗೆ ಮತ್ತೊಂದು ಆಸೆ ಇದೆ.ಅದೇನಂತೆ ಗೊತ್ತಾ…?ಮುಂದೆ ಓದಿ

ಶೀತಲ್ ಶೆಟ್ಟಿ ನಟಿಸಿರುವ 'ಪತಿಬೇಕು ಡಾಟ್ ಕಾಮ್' ಚಿತ್ರದ ನಿರ್ದೇಶಕ ರಾಕೇಶ್ ಅವರಿಗೆ ಭಿನ್ನವಾದೊಂದು ಆಸೆ ಇದೆ. ಚಿತ್ರದ ಆಡಿಯೋವನ್ನು ಭಿನ್ನ ರೀತಿಯಲ್ಲಿ ಸಿಎಂ ಕುಮಾರಸ್ವಾಮಿ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎಂಬ ಆಸೆ ಇದೆಯಂತೆ..ಆದರೆ ಎಲ್ಲರೂ ಯೋಚನೆ ಮಾಡಬಹುದು ಅದು  ಹೇಗಪ್ಪಾ ಅಂತಾ..ಕುಮಾರಸ್ವಾಮಿ ಅವರ ಜನತಾ ದರ್ಶನದ ವೇಳೆ ಆಡಿಯೋ ಬಿಡುಗಡೆ ಮಾಡಿಸುವುದಾಗಿ ತಿಳಿಸಿದ್ದಾರೆ. ಹೀಗೊಂದು ಆಸೆ ಹೊತ್ತಿರುವ ಚಿತ್ರತಂಡ ಈ ಕುರಿತು ಸಿಎಂಗೆ ಪತ್ರವನ್ನು ಕೂಡ ಬರೆದಿದೆಯಂತೆ. 'ನೀವು ಸಿನಿಮಾ ಕ್ಷೇತ್ರದವರೇ ಆಗಿರುವುದರಿಂದ ನಿಮ್ಮಿಂದ ನಮ್ಮ ಚಿತ್ರದ ಆಡಿಯೋ ಬಿಡುಗಡೆ ಮಾಡಿಸಬೇಕು ಎಂದುಕೊಂಡಿದ್ದೇವೆ. ಸಾಮಾನ್ಯ ಜನರ ಕತೆ ಹೊತ್ತಿರುವ ನಮ್ಮ ಚಿತ್ರದ ಆಡಿಯೋ ಸಾಮಾನ್ಯ ಜನರ ನಡುವಲ್ಲೇ ಬಿಡುಗಡೆಯಾಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ನಿಮ್ಮ ಜನತಾ ದರ್ಶನದ ವೇಳೆ ನಾವೂ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ನಿಮ್ಮಿಂದ ಆಡಿಯೋ ಬಿಡುಗಡೆ ಮಾಡಿಸಬೇಕು ಎಂದು ಬಯಸಿದ್ದೇವೆ. ಇದಕ್ಕೆ ತಾವು ದಯಮಾಡಿ ಒಪ್ಪಿಗೆ ನೀಡಬೇಕು' ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ  ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕರಾದ ರಾಕೇಶ್.

Edited By

Manjula M

Reported By

Manjula M

Comments