ಅಯೋಗ್ಯ ಸಿನಿಮಾದ ನಾಯಕ ಗರಂ ಆಗಿದ್ದೇಕೆ..!?

27 Aug 2018 11:10 AM | Entertainment
300 Report

ಅಯೋಗ್ಯ ಸಿನಿಮಾದ ನಾಯಕ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಗರಂ ಆಗಿದ್ದರೆ. ನೀನಾಸಂ ತಮ್ಮ ಕೋಪವನ್ನು ಫೇಸ್ ಬುಕ್ ಲೈವ್ ನಲ್ಲಿ ಹೇಳುವ ಮೂಲಕ ತೋರಿಸಿದ್ದಾರೆ. ಅದಕ್ಕೆ ಕಾರಣ ಕನ್ನಡ ಚಿತ್ರರಂಗದ ಸಂಕಷ್ಟ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾಡುತ್ತಿರುವ ತಾರತಮ್ಯ.

ಇತ್ತೀಚೆಗಷ್ಟೇ ನಟ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಭರ್ಜರಿ ಕಲೆಕ್ಷನ್ ಹೊರತಾಗಿಯೂ ಈ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಗಳು ತಾರತಮ್ಯ ತೋರುತ್ತಿವೆ ಎಂದು ಸತೀಶ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರಗಳಿಗೆ ಹೆಚ್ಚು ಪ್ರಾತಿನಿಧ್ಯತೆ ಕೊಡಬೇಕು ಎಂದಿದ್ದಾರೆ.

Edited By

Manjula M

Reported By

Manjula M

Comments