ಚಾಲೆಂಜಿಂಗ್ ಸ್ಟಾರ್ ದರ್ಶನ್  ಈ ಕಾರಣಕ್ಕೆ ತಮ್ಮ ಫೋಟೋಗಳನ್ನು ಹರಾಜು ಹಾಕಲಿದ್ದಾರೆ..! ಕಾರಣ ಏನ್ ಗೊತ್ತಾ..?

22 Aug 2018 5:00 PM | Entertainment
293 Report

ಸ್ಯಾಂಡಲ್’ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಸಾಕು ಅದೇಷ್ಟೋ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಕಾಣಿಸುತ್ತದೆ. ಅದೆಷ್ಟೋ ಲೆಕ್ಕವಿಲ್ಲದಷ್ಟು ಜನರಿಗೆ ಮನಃಪೂರ್ತಿ ಸಹಾಯ ಮಾಡಿದ್ದಾರೆ. ಇದೀಗ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ದಾಸ..

ಅವರು ಇತ್ತೀಚಿಗೆ ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಅರಣ್ಯ ವಾಚರ್ಸ್​​​​ಗಳ ಪರಿಸ್ಥಿತಿ ಕಂಡು ಮರುಗಿದ್ದರು.  ಅವರೆಲ್ಲರ ಕಲ್ಯಾಣಕ್ಕಾಗಿ ನಿಧಿ ನೀಡುವುದಾಗಿಯೂ ಕೂಡ ದಾಸ  ಭರವಸೆ ನೀಡಿದ್ದರು. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮೈಸೂರಿನಲ್ಲಿ ತಾವು ಮತ್ತು ತಮ್ಮ ಸ್ನೇಹಿತರು ಕ್ಲಿಕ್ಕಿಸಿರುವ ವೈಲ್ಡ್ ಲೈಫ್ ಪೋಟೋಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದಾರೆ. ಇದರಲ್ಲಿ ಸಂಗ್ರಹವಾದ ಹಣವನ್ನು ಅರಣ್ಯ ರಕ್ಷಣೆ ಹಾಗೂ ಫಾರೆಸ್ಟ್ ವಾಚರ್ಸ್ ಗಳ ಜೀವ ವಿಮೆ, ಆರೋಗ್ಯ ವಿಮೆ, ಅವರ ಮಕ್ಕಳ ಶಿಕ್ಷಣ, ಮನೆ ಮುಂತಾದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ನೀಡಲಿದ್ದಾರೆ ಎಂದು ಹೇಳಲಾಗಿದೆ.

Edited By

Manjula M

Reported By

Manjula M

Comments