ರಾಜು ಕನ್ನಡ ಮೀಡಿಯಂ ಹುಡುಗ ಈಗ ರಾಜು ಜೇಮ್ಸ್ ಬಾಂಡ್..!

20 Aug 2018 5:30 PM | Entertainment
491 Report

ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಸಿನಿಮಾಗಳ ಪಟ್ಟಿಗೆ ಫಸ್ಟ್ ರ್ಯಾಂಕ್ ರಾಜು ಹಾಗೂ ರಾಜು ಕನ್ನಡ ಮೀಡಿಯಂ ಕೂಡ ಸೇರಿಕೊಳ್ಳುತ್ತವೆ. ಈ ಸಿನಿಮಾಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದ ನಟ ಗುರುನಂದನ್ ಈಗ ಜೇಮ್ಸ್ ಬಾಂಡ್ ಎಂಬ ಹೊಸ ಸಿನಿಮಾದೊಂದಿಗೆ ಮತ್ತೆ  ವಿಭಿನ್ನ ಗೆಟಪ್ ನಲ್ಲಿ ತೆರೆ ಮೇಲೆ ಬಂದಿದ್ದಾರೆ.

ದೀಪಕ್ ಮಧುವನಹಳ್ಳಿ 'ರಾಜು ಜೇಮ್ಸ್ ಬಾಂಡ್' ಎಂಬ ಹೊಸ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಸಿನಿಮಾದ ಕಥೆ ರಿಯಲ್ ಅಂತೆ. ಪಂಜಾಬ್ ನಲ್ಲಿ ನಡೆದ ಬ್ಯಾಂಕ್ ದರೋಡೆ ಕಥೆಯನ್ನು ಕನ್ನಡದಲ್ಲಿ ಸಿನಿಮಾ ರೂಪವಾಗಿ ತೆರೆಗೆ ತರಲಾಗುತ್ತಿದೆ ಎನ್ನುತ್ತಿದೆ ಚಿತ್ರತಂಡ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಗುರುನಂದನ್ ಗೆ ನಾಯಕಿಯಾಗಿ ಮೃದುಲ ಪಟ್ಟನಶೆಟ್ಟಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments