ಇಂದು ಸಪ್ತಪದಿ ತುಳಿಯಲಿರುವ ಪವನ್ ಒಡೆಯರ್-ಅಪೇಕ್ಷಾ ಜೋಡಿ

20 Aug 2018 9:42 AM | Entertainment
398 Report

ಸ್ಯಾಂಡಲ್ ವುಡ್ ನಲ್ಲಿ ಒಬ್ಬರ ನಂತರ ಒಬ್ಬರ ಮದುವೆ ನಡೆಯುತ್ತಲೆ ಇದೆ. ಇಂದು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷ ಅವರ ಮದುವೆ ಜರುಗಲಿದೆ.

ಬಾಗಲಕೋಟೆಯಲ್ಲಿರುವ ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷ ಪುರೋಹಿತ್ ಅವರ ಆರತಕ್ಷತೆ ಕಾರ್ಯಕ್ರಮವು ನಿನ್ನೆ ರಾತ್ರಿ ನಡೆದಿದೆ. ಇಂದು ಅವರ ವಿವಾಹ ನಡೆಯಲಿದ್ದು, ಕನ್ನಡ ಚಿತ್ರರಂಗದವರು ಸೇರಿದಂತೆ ಅನೇಕ ಗಣ್ಯರು ಪವನ್ ಒಡೆಯರ್ ಮತ್ತು ಅಪೇಕ್ಷ ಮದುವೆಗೆ ಆಗಮಿಸಿ ಶುಭ ಕೋರಲಿದ್ದಾರೆ

Edited By

Manjula M

Reported By

Manjula M

Comments