‘ಹೇಟ್ ಯು ರೋಮಿಯೋ’ ವೆಬ್ ಸೀರಿಸ್ ನ ಫಸ್ಟ್ ಲುಕ್ ರಿಲೀಸ್..!

17 Aug 2018 1:45 PM | Entertainment
143 Report

ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಎರಡನೇ ಮಗಳು ನಿವೇದಿತಾ ಅವರು ವೆಬ್ ಸೀರಿಸ್ ನ ‘ಹೇಟ್ ಯು ರೋಮಿಯೋ’ ಚಿತ್ರವನ್ನು ನಿರ್ದೇಶನ ಮಾಡುವುದರ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತೆ ಇದೆ.

ಅಷ್ಟೆ ಅಲ್ಲದೇ ಈ ವೆಬ್ ಸೀರಿಸ್ ಚಿತ್ರಕ್ಕೆ ಹೊಸ ನಟನ ಆಗಮನ ಆಗಿದೆ.  ‘ಹೇಟ್ ಯು ರೋಮಿಯೋ’ ವೆಬ್ ಸೀರಿಸ್ ಚಿತ್ರದಲ್ಲಿ ನಾಯಕ ನಟನಾಗಿ ಅರವಿಂದ್ ಮತ್ತು ನಾಯಕಿಯಾಗಿ ದಿಶಾ ಮದನ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಇವರ ಜೊತೆಗೆ ವಿಕ್ಕಿ ಕೂಡ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿವೇದಿತಾ ಅವರ ವೆಬ್ ಸೀರಿಸ್ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.ಈಗಾಗಲೇ ಈ ವೆಬ್ ಸೀರಿಸ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಪೋಸ್ಟರ್ ನಲ್ಲಿ ವಿಕ್ಕಿ ಕಾಣಿಸಿಕೊಂಡಿದ್ದಾರೆ.‘ಹೇಟ್ ಯು ರೋಮಿಯೋ’ ಸ್ಯಾಂಡಲ್ ವುಡ್ ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲೇ ಪ್ರಥಮ ವೆಬ್ ಸೀರಿಸ್ ಆಗಲಿದೆ. ಈ ವೆಬ್ ಸೀರಿಸ್ ಅನ್ನು ನಟ ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಸಿನಿ ಸರ್ವೀಸ್ ಹಾಗೂ ಸಕತ್ ಸ್ಟುಡಿಯೋ ಸಹಭಾಗಿತ್ವದಲ್ಲಿ ತಯಾರು ಮಾಡಲಾಗುತ್ತಿದೆ. ಮುಂಬರುವ ವಾರದಿಂದಲೇ ಈ ಚಿತ್ರದ ಚಿತ್ರೀಕರಣ ವಿಯೆಟ್ನಾಂ ನಲ್ಲಿ ನಡೆಯಲಿದೆ. ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ‘ಹೇಟ್ ಯು ರೋಮಿಯೋ’ ವೆಬ್ ಸೀರಿಸ್ ನ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Edited By

Manjula M

Reported By

Manjula M

Comments