ಅಮ್ಮನಾದ ಸಂತಸದಲ್ಲಿ ಅನು ಪ್ರಭಾಕರ್

ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ ಗಳಲ್ಲಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಜೋಡಿ ಕೂಡ ಒಂದು. ಅವರ ಬಾಳಲ್ಲಿ ಪುಟ್ಟ ಕಂದಮ್ಮವೊಂದು ಆಗಮವಾಗಿದೆ. ಅನು ಪ್ರಭಾಕರ್ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತಸದಲ್ಲಿದ್ದಾರೆ.
ಈ ಸಂತಸದ ವಿಷಯವನ್ನು ಅನು ಪ್ರಭಾಕರ್ ಅವರ ಪತಿ ರಘು ಮುಖರ್ಜಿ ಅವರೇ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ''ಮಗು ಹಾಗೂ ಅನು ಪ್ರಭಾಕರ್ ಇಬ್ಬರು ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು'' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
Comments