ಕಿಚ್ಚನ ಹುಟ್ಟುಹಬ್ಬಕ್ಕೆ 'ಕೋಟಿಗೊಬ್ಬ 3' ಚಿತ್ರತಂಡದಿಂದ ಸಿಗ್ತಿದೆ ಭರ್ಜರಿ ಗಿಫ್ಟ್

14 Aug 2018 1:46 PM | Entertainment
514 Report

ಸ್ಯಾಂಡಲ್ ವುಡ್’ನಲ್ಲಿ  ಅಭಿನಯ ಚಕ್ರವರ್ತಿ ಅಂತಾನೆ ಫೇಮಸ್ ಆಗಿರುವ ನಟ ಅಂದರೆ ಅದು ನಟ ಕಿಚ್ಚ ಸುದೀಪ್… ಇನ್ನೇನು ಅವರ ಹುಟ್ಟುಹಬ್ಬಕ್ಕೆ ಇನ್ನು ಒಂದು ತಿಂಗಳಷ್ಟೆ ಬಾಕಿ ಇದೆ. ಈ ಬಾರಿ 'ಕೋಟಿಗೊಬ್ಬ 3' ಚಿತ್ರತಂಡದಿಂದ ಅಭಿನಯ ಚಕ್ರವರ್ತಿಗೆ  ಒಂದು ಕಾಣಿಕೆ ಸಿಗಲಿದೆ.

ಸದ್ಯ ಸುದೀಪ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಅದರ ಜೊತೆ 'ಕೋಟಿಗೊಬ್ಬ 3' ಚಿತ್ರ ಕೂಡ ಒಂದಾಗಿದೆ. ಇನ್ನು ಈ ಸಿನಿಮಾದ ಮೊದಲ ಟೀಸರ್ ಸುದೀಪ್ ಹುಟ್ಟುಹಬ್ಬದ ದಿನ ಅಂದರೆ ಸೆಪ್ಟೆಂಬರ್ 2 ರಂದು ಬಿಡುಗಡೆ ಮಾಡಲಿದೆ ಚಿತ್ರತಂಡ. ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಆಧಾರಿತ ಚಿತ್ರ ಇದಾಗಿದೆ. ಇದೇ ಕಾರಣಕ್ಕೆ ವಿದೇಶದಲ್ಲಿಯೇ ಹೆಚ್ಚು ಚಿತ್ರಿಕರಣ ಮಾಡಲಾಗಿದೆ. ಶಿವ ಕಾರ್ತಿಕ್ ಎಂಬುವರು 'ಕೋಟಿಗೊಬ್ಬ-3' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ತೆರೆ ಮೇಲೆ ಹೇಗೆ ಮೂಡಿ ಬರುತ್ತದೆ ಅನ್ನೊದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments