ಸಿಂಪಲ್ ಸುನಿ ನಿರ್ದೇಶನದ 'ಬಜಾರ್' ಸಿನಿಮಾ ಸಾಂಗ್ ರಿಲೀಸ್

11 Aug 2018 10:44 AM | Entertainment
236 Report

ಸಿಂಪಲ್ ಸುನಿ ಚಮಕ್ ಚಿತ್ರದ ಸಕ್ಸಸ್ ನಂತರ ಬಜಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.. ಈಗ ಬಜಾರ್ ನ ಹೊಸ ಸಿನಿಮಾ ಸಾಂಗ್ ಕೂಡ ರಿಲೀಸ್ ಆಗಿದೆ. ಲವರ್ಸ್ ಗಳ ಲವ್ ಫೇಲ್ಯೂರ್ ಸಾಂಗ್ ನ ಲಿರಿಕಲ್ ವಿಡಿಯೋ ಇಂದು ಬಿಡುಗಡೆಯಾಗಿದೆ . ಬಜಾರ್’ನ ಈ ಹಾಡಿಗೆ ವಿಜಯ್ ಪ್ರಕಾಶ್ ಕಂಠದಾನ ಮಾಡಿದ್ದಾರೆ. ಸಂಗೀತ ಸಂಯೋಜನೆಯನ್ನು ರವಿ ಬಸ್ರೂರು ಮಾಡಿದ್ದಾರೆ.

ಈ ಬಜಾರ್ ಸಿನಿಮಾ ನೋಡಲು ಪಕ್ಕಾ ಕಮರ್ಷಿಯಲ್ ಸಿನಿಮಾದಂತೆ ಕಾಣಿಸುತ್ತಿದ್ದು ಇದರ ಕಥೆ ಅಂಡರ್ ವರ್ಲ್ಡ್ ಕಥೆಯಾಗಿದೆ. ಈ ಸಿನಿಮಾದಲ್ಲಿ  ಪ್ರೇಮ ಸಂದೇಶವನ್ನು ಹೇಳುವ ಪಾರಿವಾಳಕ್ಕೂ ಪ್ರಮುಖ ಪಾತ್ರವಿದೆ. ಪಾರಿವಾಳಗಳ ಬೆಟ್ಟಿಂಗ್ ನಲ್ಲಿ ನಡೆಯುವ ಪ್ರೇಮಕಥೆಯನ್ನು ನಿರ್ದೇಶಕರು ಎಳೆ ಎಳೆಯಾಗಿ ಹೇಳಲು ಹೊರಟಿದ್ದಾರೆ..ಧನ್ವೀರ್ ಗೌಡ ಈ ಚಿತ್ರದ ಮೂಲಜ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.. ಧೈರ್ಯಂ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಆದಿತಿ ಪ್ರಭುದೇವ ಈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಸಿನಿಮಾಗೆ ತಿಮ್ಮೇಗೌಡ ಎಂಬುವವರು ಬಂಡವಾಳ ಹೂಡಲಿದ್ದಾರೆ.

Edited By

Manjula M

Reported By

Manjula M

Comments