'ಸ್ನೇಹಿತರ ದಿನಾಚರಣೆ' ಗೆ ದಚ್ಚು-ಕಿಚ್ಚ ನ ಅಭಿಮಾನಿಗಳಿಗೆ ಸಿಗಲಿದೆ ಸರ್‌ಪ್ರೈಸಿಂಗ್ ಗಿಫ್ಟ್..!!

03 Aug 2018 10:13 PM | Entertainment
1540 Report

ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್, ಕುಚುಕು ಗೆಳೆಯರೆಂದೇ ಗುರುತಿಸಿಕೊಂಡಿದ್ದರು. ಆದರೆ ಇಬ್ಬರ ನಡುವೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ ಪರಸ್ಪರ ಮುನಿಸಿಕೊಂಡಿದ್ದರು. ಇದೀಗ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಖುಷಿ ಪಡುವ ವಿಚಾರವೊಂದು ಹೊರಬಿದ್ದಿದೆ.

ಕನ್ನಡ ಚಿತ್ರರಂಗದ ಹಿರಿಯಣ್ಣನೆಂದೇ ಪರಿಗಣಿಸಲ್ಪಟ್ಟಿರುವ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್, ದರ್ಶನ್ ಹಾಗೂ ಸುದೀಪ್ ಅವರನ್ನು ಮತ್ತೆ ಒಗ್ಗೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕಿಚ್ಚ ಸುದೀಪ್ ನಿರ್ಮಾಣದ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ನಾಯಕ ನಟನಾಗಿರುವ ಅಂಬರೀಶ್, ಆಗಸ್ಟ್ 10 ರಂದು ನಡೆಯಲಿರುವ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಹ್ವಾನಿಸಿದ್ದು ಇದರಲ್ಲಿ ಪಾಲ್ಗೊಳ್ಳಲು ದರ್ಶನ್ ಸಹ ಸಮ್ಮತಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಸಮಾರಂಭದಲ್ಲಿ ಸುದೀಪ್ ಹಾಗೂ ದರ್ಶನ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯಲಿದ್ದು 'ಸ್ನೇಹಿತರ ದಿನಾಚರಣೆ' ಸಂದರ್ಭದಲ್ಲಿ ಈ ಖ್ಯಾತ ನಟರು ಮತ್ತೆ ಒಗ್ಗೂಡುತ್ತಿರುವುದು ಅಭಿಮಾನಿಗಳಿಗೆ ಸರ್‌ಪ್ರೈಸಿಂಗ್ ಗಿಫ್ಟ್ ಸಿಗಲಿದೆ.

 

Edited By

Shruthi G

Reported By

Shruthi G

Comments