ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯರ್' ಚಿತ್ರದ ಟೈಟಲ್ ಗೆ ಸಮ್ಮತಿ ಸೂಚಿಸಿದ ರಾಜಮಾತೆ ಪ್ರಮೋದಾದೇವಿ

01 Aug 2018 11:06 AM | Entertainment
163 Report

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ `ಒಡೆಯರ್' ಚಿತ್ರದ ಟೈಟಲ್ ಗೆ ಬಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಇದೀಗ  ಒಡೆಯರ್ ಮನೆತನದ ರಾಜಮಾತೆಯಾದ ಪ್ರಮೋದಾದೇವಿಯವರೆ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ನಟ ದರ್ಶನ ಅಭಿನಯದ `ಒಡೆಯರ್' ಚಿತ್ರದ ಹೆಸರು ಬದಲಾವಣೆ ಮಾಡಬೇಕೆಂದು ಎರಡು ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು…. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, 'ಚಿತ್ರಕ್ಕೆ ಒಡೆಯರ್ ಎಂದು ಹೆಸರಿಟ್ಟಿರಿವುದಕ್ಕೆ ನಮಗೆ ಯಾವುದೇ ರೀತಿಯ ಆಕ್ಷೇಪವಿಲ್ಲ. ಆದರೆ ಈ ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ಆಕ್ಷೇಪ ಮಾಡುವುದಾಗಿ ರಾಜಮಾತೆ ಪ್ರಮೋದಾದೇವಿಯವರು ತಿಳಿಸಿದ್ದಾರೆ.

Edited By

Manjula M

Reported By

Manjula M

Comments