ಕನ್ನಡ ಬಿಗ್ ಬಾಸ್ ಗೆ ಹೋಗ್ಬೇಕಾ..ಹಾಗಾದ್ರೆ ನೀವ್ ಮಾಡಬೇಕಿರೋದು ಇಷ್ಟೆ…!?

31 Jul 2018 11:00 AM | Entertainment
1190 Report

ಬಿಗ್ ಬಾಸ್ ರಿಯಾಲಿಟಿ ಶೋ ಗೆ ನಾವ್ ಹೋಗ್ಬೇಕು, ನಾವ್ ಹೋಗ್ಬೇಕು ಅಂತ ಜನ ಕಾತುರದಿಂದ ಕಾದು ನಿಂತಿದ್ದಾರೆ. ಈ ಬಾರಿ ಸಾಮಾನ್ಯ ಜನರ ಎಂಟ್ರಿ ಇದ್ಯೋ ಇಲ್ವೋ ಅಂತ ಜನ ಗೊಂದಲಕ್ಕೊಳಗಾಗಿದ್ದರು. ಆದ್ರೀಗ ವಾಹಿನಿಯವರು ಸಾಮಾನ್ಯ ಜನರ ಎಂಟ್ರಿಗೆ ಅಪ್ಲಿಕೇಷನ್ ಹಾಕೋದಕ್ಕೆ ತಿಳಿಸಿದ್ದಾರೆ. ಹೌದಾ..? ಹಾಗಾದ್ರೆ ಹೇಗೆ ಅಪ್ಲಿಕೇಷನ್ ಹಾಕೋದು..? ಅಪ್ಲಿಕೇಷನ್ ಅನ್ನ ಎಲ್ಲಿ ಪಡೆಯೋದು ಅಂತೀರಾ..?

ಕಳೆದ ಬಾರಿ ಬಿಗ್ ಬಾಸ್ ಮನೆಗೆ ಹೋಗಲು ಜನ ಸಾಮಾನ್ಯರಿಗೂ ಅವಕಾಶ ಮಾಡಿಕೊಟ್ಟು ಹೊಸದೊಂದು ಇತಿಹಾಸವನ್ನ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಹುಟ್ಟುಹಾಕಿತ್ತು. ಈ ಮೂಲಕ ಸಾಮಾನ್ಯರು ಸಹ ಬಿಗ್ ಬಾಸ್ ಮನೆಗೆ ಹೋಗುವ ಆಸೆಯನ್ನ ಚಿಗುರೊಡೆಯುವಂತೆ ಮಾಡಿತು. ಈಗ ಮತ್ತೆ ಬಿಗ್ ಬಾಸ್ ಸೀಸನ್ 6 ರ ಮನೆ ಸೇರಲು ನಿಮಗೂ ಅವಕಾಶವಿದೆ. ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೆ..ಅದೇನಂದ್ರೆ ಬಿಗ್ ಬಾಸ್ ಗೆ ಸ್ಪರ್ಧಿಯಾಗೋಕೆ ‘ನಾನ್ ರೆಡಿ ಅಂತ ಈ ಅಪ್ಲಿಕೇಷನ್ ಅನ್ನ ಫಿಲ್ ಮಾಡಿ ಅಪ್ ಲೋಡ್ ಮಾಡಿದ್ರೆ ಮುಗಿತು’. ಹೌದು, ಇದು ಬಿಗ್ ಬಾಸ್ ಮನೆಯವರೇ ನೀಡುತ್ತಿರುವ ಅಧಿಕೃತ ಆಮಂತ್ರಣ. ಮತ್ತಿನ್ನೇಕೆ ತಡ.. ಈಗ್ಲೆ ಅಪ್ಲಿಕೇಷನ್ ಹಾಕೋದಕ್ಕೆ ರೆಡಿಯಾಗಿ. ನಿಮ್ಮ ಹೆಸರು, ಊರು, ಮೊಬೈಲ್ ನಂಬರ್, ಈಗಿನ ಒಂದು ಫೋಟೋ, ನಿಮ್ಮ ಫೇಸ್ ಬುಕ್ ಪ್ರೋಫೈಲ್, ಇನ್ಸ್ಟಾಗ್ರಾನಲ್ಲಿದ್ರೆ ಅದರ ಅಡ್ರೆಸ್ಸ್, ಟ್ವಿಟರ್ ಖಾತೆ ಹೊಂದಿದ್ದರೆ ಅದನ್ನೂ ಸಹ ಅಪ್ಲಿಕೇಷನ್ ನಲ್ಲಿ ಸೇರಿಸಿ ಅಪ್ ಲೋಡ್ ಮಾಡಿ.. ಇದರೊಂದಿಗೆ 3 ನಿಮಿಷದೊಳಗಿನ ನಿಮ್ಮದೊಂದು ವೀಡಿಯೋವನ್ನ ಕೂಡ ಕಳುಹಿಸಿಕೊಡಬೇಕು. 50MB ಮೀರದಂತೆ ನಿಮ್ಮ ವೀಡಿಯೋ ಫೈಲ್ ಅನ್ನ ಅಪ್ಲೋಡ್ ಮಾಡಿದ್ರೆ ಸಾಕು.ಇನ್ನು ಇಷ್ಟೂ ಕೆಲಸವನ್ನ ನೀವು ಮಾಡಿ ಬಿಗ್ ಬಾಸ್ ಕರೆಗಾಗಿ ಕಾಯೋದಷ್ಟೆ. ನಿಮ್ಮ ವೀಡಿಯೋ, ನಿಮ್ಮ ಪ್ರೊಫೈಲ್ ಬಿಗ್ ಬಾಸ್ ಗೆ ಇಷ್ಟವಾದ್ರೆ ಈ ಬಾರಿ ಪಕ್ಕ ಬಿಗ್ ಬಾಸ್ ಮನೆಯಲ್ಲಿ ನೀವು ಸಹ ಇರಬಹುದು. ಹಾಗಿದ್ರೆ ಮತ್ಯಾಕ್ ತಡ ಇಲ್ಲಿರೋ ಲಿಂಕ್ ಕ್ಲಿಕ್ಕಿಸಿದ್ರೆ ಸಾಕು ನಿಮಗೆ ನಿಮ್ಮ ಬಿಗ್ ಬಾಸ್ ಅಪ್ಲಿಕೇಷನ  ಸಿಗುತ್ತೆ. https://www.voot.com/biggbosskannada  ಈಗ್ಲೆ ಫಿಲ್ ಮಾಡಿ ನೀವು ಸಹ ಬಿಗ್ ಮನೆಗೆ ಹೋಗಿಬನ್ನಿ

Edited By

Manjula M

Reported By

Manjula M

Comments

Cancel
Done