ಸ್ಯಾಂಡಲ್'ವುಡ್ ನಲ್ಲಿ ಶುರುವಾಯ್ತು ಮತ್ತೊಂದು ಟೈಟಲ್ ವಿವಾದ ..!

27 Jul 2018 2:56 PM | Entertainment
202 Report

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಟೈಟಲ್ ವಿವಾದ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಸಿನಿಮಾದ ಹೆಸರಿನ ಬದಲಾವಣೆಗೆ ಕನ್ನಡ ಕ್ರಾಂತಿದಳ ಸಂಘಟನೆಯು ಪಟ್ಟು ಹಿಡಿದಿದೆ. ಮೈಸೂರಿನ ಕೆ.ಆರ್.ಠಾಣೆಯಲ್ಲಿ ಚಿತ್ರ ತಂಡದ ವಿರುದ್ದ ದೂರನ್ನು ದಾಖಲಿಸಲಾಗಿದೆ.

ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತಾಗಿದೆ. ಅವರ ಮೇಲೆ ಅಪಾರ ಗೌರವ ಅಭಿಮಾನವಿದೆ. ನೆಲ ಜಲವಿಚಾರದಲ್ಲಿ ಅವರ ಕೊಡುಗೆ ಅಪಾರ. ಮೈಸೂರು ಜನತೆ ಅರಸರನ್ನು ದೇವರರೀತಿಯಲ್ಲಿ ಕಾಣುತ್ತೇವೆ. ರೌಡಿಸಂ ,ಹಾಸ್ಯ,ವ್ಯಾಪಾರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರಿಕರಣಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Edited By

Manjula M

Reported By

Manjula M

Comments