ರಚಿತಾ ರಾಮ್'ಗೆ ಜೋಡಿಯಾಗಲಿದ್ದಾರೆ  ಬಾಲಿವುಡ್ ನ ವಿವೇಕ್ ಒಬೆರಾಯ್..!

25 Jul 2018 4:32 PM | Entertainment
293 Report

ರಚಿತಾ ರಾಮ್ ಇದೀಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದು ಖಳನಾಯಕನ ಜೋಡಿಯಾಗಿ. ಬಾಲಿವುಡ್‌ನ ವಿಲನ್ ವಿವೇಕ್ ಒಬೆರಾಯ್. ರವಿವರ್ಮ ನಿರ್ದೇಶನದ 'ರುಸ್ತುಂ' ಚಿತ್ರದಲ್ಲಿ ವಿವೇಕ್  ಒಬೆರಾಯ್ ಜೋಡಿಯಾಗಿ ರಚಿತಾ ನಟಿಸಲಿದ್ದಾರೆ.

ಶಿವರಾಜ್‌ಕುಮಾರ್ ಮತ್ತು  ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದ ಚಿತ್ರಿಕರಣ ಭರದಿಂದ ಸಾಗುತ್ತಿದೆ. ಇದೇ ಸಮಯದಲ್ಲಿ  ರಚಿತಾ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕತೆಗೆ ಬಹು ಮುಖ್ಯವಾದ ತಿರುವು ಕೊಡುವ ಪಾತ್ರ ಇದು ಎಂದು ಹೇಳಲಾಗಿದೆ. ಮೊದಲ ಬಾರಿಗೆ ಬಾಲಿವುಡ್ ನಟನ ಜತೆ ನಟಿಸುತ್ತಿರುವ ಖುಷಿಯಲ್ಲಿದ್ದಾರೆ ರಚಿತಾ ರಾಮ್. ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments