ಧಡಕ್ ಚಿತ್ರಕ್ಕೆ ಜಾಹ್ನವಿ ಕಪೂರ್ ಪಡೆದ ಸಂಭಾವನೆ ಎಷ್ಟು ಗೊತ್ತಾ..?

24 Jul 2018 12:35 PM | Entertainment
412 Report

ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಧಡಕ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಮೂರು ದಿನಗಳಲ್ಲಿ ಧಡಕ್ ಚಿತ್ರವು 33.67 ಕೋಟಿ ಗಳಿಕೆಯನ್ನು ಕಂಡಿದೆ. ಈ ಚಿತ್ರವು ಶೀಘ್ರವೇ 50 ಕೋಟಿ ಕ್ಲಬ್ ಸೇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅವರ ಮೊದಲ ಚಿತ್ರ ಇದಾಗಿದೆ. ಇಶಾನನ ಎರಡನೇ ಚಿತ್ರವಾಗಿದೆ.

ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಮೊದಲ ಚಿತ್ರಕ್ಕಾಗಿ ಜಾಹ್ನವಿ ಕಪೂರ್ ಸುಮಾರು 50-60 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರಂತೆ. ಇಶಾನ್ ಗೆ ಕೂಡ 50-60 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ. ಧಡಕ್ ಚಿತ್ರದ ಖಳನಾಯಕನಿಗೆ ಹಿರೋ-ಹಿರೋಯಿನ್ ಗಿಂತ ಹೆಚ್ಚಿನ ಸಂಭಾವನೆಯೇ ಸಿಕ್ಕಿದೆಯಂತೆ. ಖಳನಾಯಕನ ಪಾತ್ರದಲ್ಲಿ ನಟಿಸಿರುವ ಅಷುತೋಷ್ ರಾಣಾ 80 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಸಂಗೀತ ನಿರ್ದೇಶಕ ಅತುಲ್-ಅಜಯ್ ಗೆ 1.5 ಕೋಟಿ ಹಣವನ್ನು ನೀಡಲಾಗಿದೆ. ಚಿತ್ರ ನಿರ್ದೇಶನ ಮಾಡಿದ ಶಶಾಂಕ್ ಗೆ 4 ಕೋಟಿ ಸಂಭಾವನೆಯು ಸಿಕ್ಕಿದೆ. ಇದು ಶಶಾಂಕ್  ಅವರ ನಾಲ್ಕನೇ ಚಿತ್ರ ಇದಾಗಿದೆ.

Edited By

Manjula M

Reported By

Manjula M

Comments