ರಿಯಾಲಿಟಿ ಷೋ ವೇದಿಕೆಯ ಮೇಲೆ ನಿರೂಪಕಿ ಅನುಶ್ರೀ ಕಣ್ಣೀರಿಟ್ಟಿದ್ದೇಕೆ..!!

23 Jul 2018 11:21 AM | Entertainment
301 Report

ಕನ್ನಡದ ಕಿರುತೆರೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ನಿರೂಪಕಿ ಎಂದರೆ ಅನುಶ್ರೀ ಎಂದರೆ ತಪ್ಪಗಲಾರದು. ಖಾಸಗೀ ವಾಹಿನಿಗಳಲ್ಲಿ ಕೆಲಸ ಮಾಡುವ ಈಕೆ ಸದ್ಯಕ್ಕೆ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ. ಇತ್ತೀಚೆಗೆ ಅನುಶ್ರೀ ಅವರ ತಾವು ನಡೆಸಿಕೊಡುವ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ…

ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾದ ಸೂರಜ್ ಮತ್ತು ಶ್ರಾವ್ಯ ಮತ್ತು ಅವರ ಮೆಂಟರ್ ರುದ್ರ ಅವರು ಜಾಲಿಡೇಸ್ ಚಿತ್ರದ ಫ್ರೆಂಡ್ಶಿಪ್ ಸಾಂಗಿಗೆ ಹೆಜ್ಜೆ ಹಾಕಿದರು, ಈ ವೇಳೆ ತೀರ್ಪುಗಾರರಾದ ರಕ್ಷಿತಾ ಅವರ ಸ್ನೇಹಿತೆ ಪ್ರಶಾಂತಿ, ಅರ್ಜುನ್ ಜನ್ಯ ಅವರ ಸ್ನೇಹಿತ ಪ್ರಕಾಶ್ ಮತ್ತು ವಿಜಯ್ ರಾಘವೇಂದ್ರ ಅವರ ಸ್ನೇಹಿತ ಕುಮಾರ್ ಅವರನ್ನು ತೋರಿಸಿದರು ಇದೇ ವೇಳೆ ಅನುಶ್ರೀ ಅವರೊಟ್ಟಿಗೆ ಅವರ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು. ತನ್ನ ತಮ್ಮನ ಪೋಟೋ ನೋಡಿ ಭಾವುಕರಾದ ಅನುಶ್ರೀ ಅವರು ಸ್ಟೇಜ್ ಮೇಲೆಯೇ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ‘‘ತುಂಬಾ ವರ್ಷಗಳ ಹಿಂದೆನಾನು ದುಡಿಮೆಗಾಗಿ ಬೆಂಗಳೂರಿಗೆ ಬಂದೆ, ಇಲ್ಲಿ ನಾನು ದುಡಿಯುತ್ತಿದ್ದರೆ ಅಲ್ಲಿ ನನ್ನ ತಮ್ಮ ನನ್ನ ತಾಯಿಯನ್ನು ಚನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನನ್ನು ಮಾಡುವುದಕ್ಕೆ ಆಗಿಲ್ಲವೋ ಅದೆಲ್ಲವನ್ನು ಅವನು ಮಾಡಿದ್ದಾನೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಒಳ್ಳೆಯ ಕೆಲಸವನ್ನು ಸಂಪಾದಿಸಿದ್ದಾನೆ. ದೇವರು ನನಗೆ ನೀಡಿರುವ ಎಲ್ಲಾ ಆಯಸ್ಸನ್ನು ಅವನಿಗೆ ನೀಡಲಿ ಎಂದು ಕೇಳಿಕೊಳ್ಳುತ್ತೇನೆ’’ ಎಂದು ಭಾವುಕರಾದರು.

Edited By

Manjula M

Reported By

Manjula M

Comments