ಅಭಿನಯ ಚಕ್ರವರ್ತಿ ಬಾಯಿಬಿಟ್ಟ ವಿಷ್ಣುದಾದಾ ಅವರ ಕನಸು, ಆ ಕನಸು ಕೊನೆಗೂ ಈಡೇರಲೇ ಇಲ್ಲ…!

20 Jul 2018 4:52 PM | Entertainment
245 Report

ವಿಷ್ಣು ದಾದಾ ಅವರ ಅಪ್ಪಟ ಅಭಿಮಾನಿ ಕಿಚ್ಚ ಸುದೀಪ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಗತೀಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ತೆರೆಕಂಡ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದಲ್ಲಿ ವಿಷ್ಣು ದಾದಾ ಮತ್ತು ಕಿಚ್ಚ ಸುದೀಪ್ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಅದೇ ರೀತಿ ಕಿಚ್ಚ ಸುದೀಪ್ ನಿರ್ದೇಶನದ ‘ಶಾಂತಿ ನಿವಾಸ’ ಚಿತ್ರದಲ್ಲಿ ವಿಷ್ಣು ದಾದಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಜೇಷ್ಠ’ ಚಿತ್ರದಲ್ಲಿ ಸುದೀಪ್ ವಿಷ್ಣು ದಾದಾಗೆ ಹಿನ್ನಲೆ ಧ್ವನಿ ನೀಡಿದ್ದರು. ವಿಷ್ಣು ದಾದಾ ಮತ್ತು ಸುದೀಪ್ ಅವರದ್ದು ಕೇವಲ ತೆರೆ ಮೇಲೆ ಮಾತ್ರವಲ್ಲದೇ, ತೆರೆ ಹಿಂದೆಯೂ ಕೂಡ ತುಂಬಾ ಒಳ್ಳೆಯ ಒಡನಾಟವನ್ನು ಹೊಂದಿದ್ದರು.ಕಿಚ್ಚ ಸುದೀಪ್ ಅವರು ಡಾ. ವಿಷ್ಣುವರ್ಧನ್ ಅವರ ಕುರಿತಾಗಿ ಒಂದು ಕುತೂಹಲಕಾರಿ ಅಂಶವೊಂದನ್ನು ಬಿಚ್ಚಿಟ್ಟಿದ್ದಾರೆ. ಡಾ. ವಿಷ್ಣುವರ್ಧನ್ ಅವರ ನಿಧನಕ್ಕೂ ಮುನ್ನಾ ಸುದೀಪ್ ಜೊತೆಗೆ ಒಂದು ವಿಷಯವನ್ನು ಹೇಳಿಕೊಂಡಿದ್ದರು ಎಂದು ಸ್ವತಃ ಸುದೀಪ್ ಅವರೇ ಬಾಯಿ ಬಿಟ್ಟಿದ್ದಾರೆ.ವಿಷ್ಣು ದಾದಾ ಗೆ ಇಂಡಿಯನ್ ರೀತಿ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತಂತೆ. ಈ ಕುರಿತು ಸುದೀಪ್ ಅವರ ಬಳಿ ಕೂಡ ಚರ್ಚೆ ಮಾಡಿದ್ದರಂತೆ. ವಿಷ್ಣು ದಾದಾ ಅವರು ನಿಧನ ಹೊಂದುವ ಮುನ್ನಾ ಒಂದೂವರೆ ವರ್ಷದ ಹಿಂದೆ ಈ ವಿಷಯವನ್ನು ಚರ್ಚೆ ಮಾಡಿದ್ದರಂತೆ.

ವಿಷ್ಣುವರ್ಧನ್ ನಟನೆಯ ಸಿನೆಮಾವನ್ನು ಕಿಚ್ಚ ಸುದೀಪ್ ನಿರ್ದೇಶನ ಮಾಡಬೇಕು ಎಂದು ಬಯಸಿದ್ದರಂತೆ. ಇದಕ್ಕೆ ಸುದೀಪ್ ಅವರು ಕೂಡ ವಿಷ್ಣುಗಾಗಿ ಒಂದು ಕಥೆಯನ್ನು ತಯಾರು ಮಾಡಿಕೊಂಡಿದ್ದರಂತೆ. ಆದರೆ ವಿಧಿ ಮಾತ್ರ ಬೇರೆಯದೇ ರೀತಿಯಲ್ಲಿ ಪ್ಲಾನ್ ಮಾಡಿಕೊಂಡು ಬಿಟ್ಟಿತ್ತು. ಸುದೀಪ್ ಅವರ ನಿರ್ದೇಶನ ಚಿತ್ರದಲ್ಲಿ ಅಭಿನಯಿಸುವ ಮುನ್ನವೇ ಭಗವಂತ ಅವರನ್ನು ಕರೆಸಿಕೊಂಡು ಬಿಟ್ಟಿದ್ದನು.ವಿಷ್ಣು ದಾದಾ ಜೊತೆ ಸಿನೆಮಾ ಮಾಡಬೇಕು ಎಂದು ಎರಡು ಬಾರಿ ಅವರ ಬಳಿ ಹೋಗಿದ್ದೆ. ಒಂದು ಹಿಂದಿಯಲ್ಲಿ ತೆರೆ ಕಂಡ ‘ಸರ್ಕಾರ್’ ಚಿತ್ರದ ತರಹದ್ದು. ಮತ್ತೊಂದು ‘ತವಮಾಯಿ ತವಮಿರುಂದು’ ಚಿತ್ರದ ರೀತಿಯದ್ದು. ಆದರೆ ಆಗಲೇ ಇಲ್ಲ. ಎರಡೂ ಸಿನೆಮಾ ಕ್ಯಾನ್ಸಲ್ ಆಯಿತು. ಕ್ಯಾನ್ಸಲ್ ಆಗಿದ್ದು ನನಗೆ ಬಹಳ ಬೇಜಾರಾಗಿತ್ತು. ಅದ್ಕಕಾಗಿ ನಾನು ಸುಮ್ಮನಾಗಿ ಬಿಟ್ಟೆ. ಇದಾದ ನಂತರ ವಿಷ್ಣು ಸರ್ ನನ್ನನ್ನು ಕರೆದು ಸಿನೆಮಾ ಮಾಡೋಣ ಎಂದು ಹೇಳಿದರು. ಅದಕ್ಕೆ ನಾನೇ ಬೇಡ ಸರ್. ಮೊದಲು ಮಾಡೋಣ ಅಂತೀರಿ ಆಮೇಲೆ ಬೇಡ ಅಂತೀರಿ ಅಂದೆ. ಅದಕ್ಕೆ ಅವರು ಇಲ್ಲ ಈ ಬಾರಿ ಸಿನೆಮಾ ಮಾಡಿಯೇ ತೀರೋಣ ಎಂದಿದ್ದರು. ಆದರೆ ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಈ ಚಿತ್ರ ‘ಸರ್ಕಾರ್’ ರೀತಿಯದ್ದೇ ಆಗಿರಬೇಕು. ಆದರೆ ರೀಮೇಕ್ ಬದಲು ಸ್ವಮೇಕ್ ಆಗಿರಬೇಕು. ಸಮಾಜಕ್ಕೆ ಉತ್ತಮ ಸಂದೇಶ ನಿಢುವಂತಹದ್ದಾಗಿರಬೇಕು ಎಂದಿದ್ದರು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

Edited By

Manjula M

Reported By

Manjula M

Comments