'6 ನೇ ಮೈಲಿ' ಸಿನಿಮಾ ನೋಡುವಂತೆ ಸುತ್ತೋಲೆ ಹೊರಡಿಸಿದ ಅಪರ ಪೊಲೀಸ್ ಆಯುಕ್ತರು..!ಕಾರಣ ಏನ್ ಗೊತ್ತಾ..?

18 Jul 2018 11:43 AM | Entertainment
154 Report

ಇತ್ತಿಚಿಗೆ ವಿಭಿನ್ನ ರೀತಿಯ ಸಿನಿಮಾ ಕಥಾ ಹಂದರವನ್ನು ಹೊಂದಿರುವಂತಹ ಸಿನಿಮಾಗಳು ಸಾಕಷ್ಟು ತೆರೆ ಮೇಲೆ ಬರುತ್ತಿವೆ. ಅದೇ ರೀತಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರ ಎಂದರೆ ಅದು 6ನೇ ಮೈಲಿ..

ಎಸ್.. ಈ ಸಿನಿಮಾ ಬಹಳ ವಿಭಿನ್ನವಾಗಿದೆಯಂತೆ.. ಪೊಲೀಸರೆಲ್ಲರೂ  6 ನೇ ಮೈಲಿ ಸಿನಿಮಾ ನೋಡಬೇಕು ಎಂದು ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತ ಎಂ ನಂಜುಂಡಸ್ವಾಮಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಜುಲೈ18 ರಂದು ಪೊಲೀಸರಿಗೆ 6 ನೇ ಮೈಲಿ ಸಿನಿಮಾ ಪ್ರದರ್ಶನ ಆಯೋಜನೆ ಮಾಡಲಾಗಿದೆ.  ಈ ಚಿತ್ರವು ಸರಣಿ ಕೊಲೆಯನ್ನು ಭೇದಿಸುವ ವಿಭಿನ್ನ ಕಥೆಯನ್ನು ಹೊಂದಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಪ್ರಕರಣ ಭೇದಿಸುವ ದೃಶ್ಯಗಳು ಸಿನಿಮಾದಲ್ಲಿದ್ದು, ಪ್ರತಿ ವಿಭಾಗದಿಂದ 5 ಮಂದಿ ಪೊಲೀಸ್ ಅಧಿಕಾರಿಗಳನ್ನು ಸಿನಿಮಾ ನೋಡಲು ಕಳುಹಿಸಿಕೊಡುವಂತೆ ಎಂ ನಂಜುಂಡಸ್ವಾಮಿ ಸೂಚನೆ ನೀಡಿದ್ದಾರೆ.ಈ ಚಿತ್ರವು ಪೋಲಿಸರಿಗೆ ಬಹಳಷ್ಟು ಸಹಕಾರಿಯಾಗಲಿದೆ ಹಾಗಾಗಿ ಈ ಸಿನಿಮಾವನ್ನು ನೋಡಬೇಕು ಎಂಬ ಸುತ್ತೊಲೆಯನ್ನು ಹೊರಡಿಸಿದ್ದಾರೆ.

Edited By

Manjula M

Reported By

Manjula M

Comments