ಸ್ಯಾಂಡಲ್ ವುಡ್ ಗೆ ಮತ್ತೆ ಎಂಟ್ರಿ ಕೊಟ್ಟ ನಟಿ ವಿಜಯ ಲಕ್ಷ್ಮಿ..!

18 Jul 2018 10:34 AM | Entertainment
337 Report

ಹಳೆಯ ನಟ ನಟಿಯರಿಗೆ ಸಿನಿಮಾ ರಂಗದಲ್ಲಿ ಯಾವುದೆ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದೇ ರೀತಿ ಖಾಸಗಿ ವಾಹಿನಿಯಲ್ಲಿ ತಮಗೆ ಕನ್ನಡದ ಚಿತ್ರರಂಗದಲ್ಲಿ ಯಾವುದೇ ರೀತಿಯ ಅವಕಾಶಗಳನ್ನು ಕೊಡುತ್ತಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದರು.

ಆದರೆ ಇದೀಗ ನಟಿ ವಿಜಯ ಲಕ್ಷ್ಮೀ ಅವರಿಗೆ ಇದೀಗ ಚಿತ್ರತಂಡವೊಂದು ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸೋಮಶೇಖರ್ ಅವರು ನಿರ್ಮಿಸುತ್ತಿರುವ 'ಫೈಟರ್' ಚಿತ್ರದಲ್ಲಿ ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದು, ವಿನೋದ್‍ಪ್ರಭಾಕರ್ ಅವರ ತಾಯಿಯಾಗಿ ನಟಿಸುವ ಅವಕಾಶ ನಟಿ ವಿಜಯ ಲಕ್ಷ್ಮೀ ಅವರಿಗೆ ಸಿಕ್ಕಿದೆ. ಈ ಚಿತ್ರದಲ್ಲಿ ದಕ್ಷ ಜಿಲ್ಲಾಧಿಕಾರಿಯಾಗಿ ಅಭಿನಯಿಸುತ್ತಿದ್ದಾರಂತೆ. ಆಗಸ್ಟ್ 6ರಿಂದ ವಿಜಯಲಕ್ಷ್ಮೀ ಅವರ ಶೂಟಿಂಗ್ ನಡೆಯಲಿದ್ದು, ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯಲಿದೆ.  

Edited By

Manjula M

Reported By

Manjula M

Comments