ದೂದ್ ಪೇಡ ದಿಗಂತ್ ಹಾಗೂ ಆ್ಯಂಡಿ ಮದುವೆ ಯಾವಾಗ ಗೊತ್ತಾ..?

16 Jul 2018 5:14 PM | Entertainment
440 Report

ಸ್ಯಾಂಡಲ್ ವುಡ್ ನಲ್ಲಿ ಮದುವೆಗಳ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ.  ಇದೀಗ ಮತ್ತೊಂದು ಜೋಡಿ ಸ್ಯಾಂಡಲ್ ವುಡ್ ನಲ್ಲಿ ಸಪ್ತ ಪದಿ ತುಳಿಯಲು ಮುಂದಾಗಿದ್ದಾರೆ. ಅವರೇ ಹಾಟ್ ಅಂಡ್ ಸ್ವೀಟ್ ಕಪಲ್​ ದೂದ್ ಪೇಡ ದಿಗಂತ್ ಹಾಗೂ ಆ್ಯಂಡಿ…

ಕನ್ನಡದ ಖಾಸಗಿ ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ  ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ನಟ ದೂದ್ ಪೇಡ ದಿಗಂತ್  ಎಲ್ಲ ಓಕೆ ಆದರೆ ಡಿಸೆಂಬರ್​ನಲ್ಲಿ ಮದುವೆಯಾಗುತ್ತೇವೆ  ಅಂತ ತಿಳಿಸಿದ್ದಾರೆ. ಸುಮಾರು ವರ್ಷಗಳಿಂದ ಇದ್ದ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

Edited By

Manjula M

Reported By

Manjula M

Comments