‘ನಟಸಾರ್ವಭೌಮ’ನಿಗಾಗಿ ಕನ್ನಡ ಕಲಿಯುತ್ತಿರುವ ಮಲಯಾಳಂ ಬೆಡಗಿ ಅನುಪಮಾ..!

09 Jul 2018 1:21 PM | Entertainment
212 Report

ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ೨೮ ನೇ 'ನಟಸಾರ್ವಭೌಮ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಟೀಸರ್ ನಿಂದ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದ ಚಿತ್ರಿಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಚಿತ್ರದ ಮೊದಲ ನಾಯಕಿ ರಚಿತಾ ರಾಮ್ ನಟನೆಯ ಭಾಗದ ಚಿತ್ರಿಕರಣವು ಮುಗಿದಿದೆ. ಇದೀಗ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್ ಅವರ ಭಾಗದ ಚಿತ್ರೀಕರಣ ಇನ್ನೂ ಬಾಕಿಯಿದೆ. ಆಗಸ್ಟ್  ತಿಂಗಳಿನಲ್ಲಿ ಅನುಪಮಾ ಅವರ ಶೂಟಿಂಗ್ ಪ್ರಾರಂಭವಾಗಲಿದೆ.ಆದರೆ  ಅದಕ್ಕೂ ಮೊದಲು ಅನುಪಮಾ ಕನ್ನಡವನ್ನು ಕಲಿಯಲು ಪ್ರಾರಂಭಿಸಿದ್ದಾರೆ. ಎಸ್… ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್ ಇದೀಗ ಸಾರ್ವಭೌಮ ಚಿತ್ರಕ್ಕಾಗಿ ಕನ್ನಡವನ್ನು ಬಹಳ ಇಷ್ಟಪಟ್ಟು ಕಲಿಯುತ್ತಿದ್ದಾರೆ. ನಟ ಸಾರ್ವಭೌಮ ಚಿತ್ರದಲ್ಲಿ ರವಿಶಂಕರ್, ಚಿಕ್ಕಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ಇನ್ನು ಹಲವಾರು ನಟರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಡಿ. ಇಮಾನ್ ಸಂಗೀತವನ್ನು ನೀಡುತ್ತಿದ್ದು, ವೈದಿಯವರ ಛಾಯಾಗ್ರಹಣವಿದೆ.

Edited By

Manjula M

Reported By

Manjula M

Comments