‘ಆ ಕರಾಳ ರಾತ್ರಿ’ಯಲ್ಲಿ ದೆವ್ವಗಳಿವ್ಯಾ…!?

05 Jul 2018 11:21 AM | Entertainment
454 Report

ಇತ್ತಿಚಿಗೆ ವಿಭಿನ್ನ ರೀತಿಯ ಸಿನಿಮಾಗಳ ತೆರೆ ಮೇಲೆ ಬರುತ್ತಿವೆ. ಅದೇ ರೀತಿ ಮತ್ತೊಂದು ಸಿನಿಮಾ ಆ ಕರಾಳ ರಾತ್ರಿ… ಹೆಸರು ಕೇಳಿದ ತಕ್ಷಣವೇ ಮನಸಿನಲ್ಲಿ ಹಾರರ್ ಕಲ್ಪನೆಗಳು ಮೂಡುವುದು ಸಹಜ.. ಆದರೆ ಈ ಸಿನಿಮಾದ ಬಗ್ಗೆ ದಯಾಳ್ ಪದ್ಮನಾಭನ್ ಅವರೇ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಜೆಕೆ ಮತ್ತು ಅನುಪಮಾ ಗೌಡ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಮೇಲ್ನೋಟಕ್ಕೆ ಹಾರರ್ ಸಿನಿಮಾ ಎಂಬ ಫೀಲ್ ಬಂದರೂ ಇದರಲ್ಲಿ ದೆವ್ವದ ಪಾತ್ರ ಇರುವುದಿಲ್ಲವಂತೆ. ಎಂಭತ್ತರ ದಶಕದಲ್ಲಿ ನಡೆಯೋ ಮೈ ನವಿರೇಳಿಸುವಂಥಾ ಕ್ರೈಂ ಥ್ರಿಲ್ಲರ್ ಅಂಶಗಳನ್ನೊಳಗೊಂಡ ಈ ಚಿತ್ರ ಒಳಗೊಂಡಿದೆಯಂತೆ. ಈ ಚಿತ್ರ ಸಾಹಿತಿ ಮೋಹನ್ ಹಬ್ಬು ರಚಿಸಿರುವ ಕರಾಳ ರಾತ್ರಿ ಎಂಬ ನಾಟಕವನ್ನು ಆಧರಿಸಿದ ಚಿತ್ರ ಇದಾಗಿದೆ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಅರಿವು ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಣ ಮಾಡಿದ್ದಂತಹ ಅವಿನಾಶ್ ಶೆಟ್ಟಿಯವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ.

Edited By

Manjula M

Reported By

Manjula M

Comments