ಡಾ. ರಾಜ್ ಮೊಮ್ಮಗ ಗುರು ರಾಜ್ ನಿಶ್ಚಿತಾರ್ಥ : ದೊಡ್ಮನೆ ಹೊಸ ಸೊಸೆ ಯಾರ್ ಗೊತ್ತಾ?

04 Jul 2018 4:53 PM | Entertainment
565 Report

ನಟಸಾರ್ವಭೌಮ ಡಾ| ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರನಾದ ಗುರು ರಾಜಕುಮಾರ್ ನಿಶ್ಚಿತಾರ್ಥವು ಜು.5ರಂದು ಮೈಸೂರಿನಲ್ಲಿ ನಡೆಯಲಿದೆ.

ಶ್ರೀದೇವಿ ಜೊತೆ ನಿಶ್ಚಿತಾರ್ಥ ನಡೆಯಲಿದ್ದು, ಇದೊಂದು ಖಾಸಗಿ ಸಮಾರಂಭವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಶ್ರೀದೇವಿ ಮೈಸೂರಿನ ಮಧ್ಯಮವರ್ಗದ ಕುಟುಂಬದವರು. ಈ ಹಿಂದೆ ಗುರು ಅವರ ಅಣ್ಣ ವಿನಯ್ ರಾಜಕುಮಾರ್ ಅವರ ರನ್ ಆಂಟನಿ ಸಿನಿಮಾದ ಪ್ರಚಾರ ಸಂಬಂಧಿ ಜವಾಬ್ದಾರಿಯನ್ನು ನೋಡಿಕೊಂಡಿದ್ದರು. ವಜ್ರೇಶ್ವರಿ ಕಂಬೈನ್ಸ್ ನಲ್ಲೂ ಕೂಡ ಕಾರ್ಯ ನಿರ್ವಹಿಸಿದ್ದರು ಎಂದು ತಿಳಿಸಲಾಗಿದೆ.

Edited By

Manjula M

Reported By

Manjula M

Comments