ಈ ರಿಯಾಲಿಟಿ ಶೋಗೆ ''ಯಾಕಾದ್ರು ಬಂದ್ನೊ'' ಅಂತಿದ್ದಾರೆ ಈ ಸೆಲಬ್ರೆಟಿಗಳು..! ವಿಡಿಯೋ ನೋಡಿ…

04 Jul 2018 2:14 PM | Entertainment
554 Report

ಇತ್ತಿಚಿಗೆ ರಿಯಾಲಿಟಿ ಷೋಗಳ ಕಾರುಬಾರು ಹೆಚ್ಚಾಗಿದೆ.  ಜನ ಸಾಮಾನ್ಯರಿಗಿಂತ ಸ್ಟಾರ್ ಗಳೆ ರಿಯಾಲಿಟಿ ಷೋಗಳಲ್ಲಿ  ಮಿಂಚುತ್ತಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಯಾಕಿಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ಜನ ಸಾಮಾನ್ಯರ ಸಾಮಾನ್ಯ ಪ್ರಶ್ನೆ. ನೂತನ ಪ್ರಯೋಗಗಳ ರಿಯಾಲಿಟಿ ಶೋಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ನೋಡುಗರನ್ನು ಮನೋರಂಜಿಸುತ್ತಿರುವುದು ಸ್ಟಾರ್ ಸುವರ್ಣ ವಾಹಿನಿ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ ನಾಲ್ಕು ರಿಯಾಲಿಟಿ ಷೋ ಮುಗಿಸಿದ ಬೆನ್ನಲ್ಲೆ ಆ್ಯಂಕರ್ ಅಕುಲ್ ಬಾಲಾಜಿ ಮತ್ತೊಂದು ಹೊಸ ಕಾರ್ಯಕ್ರಮಕ್ಕೆ ಆಂಕರ್ ಆಗಿದ್ದಾರೆ.  ಆ ಹೊಸ ಕಾರ್ಯಕ್ರಮದ ಹೆಸರು 'ಸಿಕ್ಸ್ತ್ ಸೆನ್ಸ್' ಈಗಾಗಲೇ ಶೋ ನ ಪ್ರೋಮೋ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳು  ಈ ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿರುವ ಎಲ್ಲರ ಬಾಯಲ್ಲೂ ಬರುತ್ತಿರೋದು ಒಂದೆ ಮಾತು, ನಮ್ಮನ್ನ ಬಿಟ್ ಬಿಡ್ರಪ್ಪಾ, ಯಾಕಾದ್ರು ಬಂದ್ನೋ, ನಾನು ಹೋಗ್ಬಿಡ್ತೀನಿ'' ಅನ್ನೋ ಡೈಲಾಗ್ ಗಳೇ ಹೈಲೈಟ್ ಆಗಿ ಕಾಣಿಸುತ್ತಿದೆ. ಚಂದನ್ ಶೆಟ್ಟಿ, ದಿಗಂತ್, ಐಂದ್ರಿತಾ ರೈ, ಅನುಪಮಾ ಗೌಡ, ಆಶಿಕಾ ರಂಗನಾಥ್, ವಸಿಷ್ಠ ಸಿಂಹ, ಕಾರುಣ್ಯ ರಾಮ್, ಹರ್ಷಿಕಾ ಪೂಣಚ್ಚ, ರಾಧಿಕಾ ಚೇತನ್, ಸತೀಶ್ ನೀನಾಸಂ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಈ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವೀಕ್ಷಕರ ಎಲ್ಲಾ ಕುತೂಹಲಗಳಿಗೆ ಇದೇ ಶನಿವಾರ ಉತ್ತರ ಸಿಗಲಿದೆ. ಎಸ್, 'ಸಿಕ್ಸ್ತ್ ಸೆನ್ಸ್' ಕಾರ್ಯಕ್ರಮ ಇದೇ ಶನಿವಾರದಿಂದ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Edited By

Manjula M

Reported By

Manjula M

Comments