ತರುಣ್ ಸುಧೀರ್ ತನ್ನ ಚೊಚ್ಚಲ ಸಿನಿಮಾವಾದ 'ಚೌಕ' ಕಥೆ ಹುಟ್ಟಿದ ಬಗ್ಗೆ ಹೇಳಲಿದ್ದಾರೆ, ..!!

30 Jun 2018 12:20 PM | Entertainment
196 Report

ಪ್ರತಿ ವಾರ ಪ್ರಕಟ ಆಗುವ 'ನನ್ನ ಮೊದಲ ಸಿನಿಮಾ' ಸರಣಿ ಲೇಖನದಲ್ಲಿ ನಾಳೆ ತರುಣ್ ಸುಧೀರ್ ಅವರ ವಿಶೇಷ ಸಂದರ್ಶನ ಪ್ರಕಟ ಆಗಲಿದೆ. ತರುಣ್ ತಮ್ಮ ಮೊದಲ ಸಿನಿಮಾ 'ಚೌಕ' ಚಿತ್ರದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ಅವರ ಲೇಖನ ನಾಳೆ ಅಂದರೆ (ಭಾನುವಾರ) 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪ್ರಕಟ ಆಗಲಿದೆ. 'ಚೌಕ' ಸಿನಿಮಾ ಹುಟ್ಟಿದ್ದು, ಆ ಚಿತ್ರ ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಬಂದಿದ್ದು, ಕಾಶೀನಾಥ್ ಅವರನ್ನು ಚಿತ್ರಕ್ಕೆ ನಟಿಸಲು ಆಹ್ವಾನ ಮಾಡಿದ್ದು, ನಟ ದರ್ಶನ್ ಕಥೆ ಹೇಳದೆ ಚಿತ್ರ ಒಪ್ಪಿಕೊಂಡಿದ್ದು, ಫಸ್ಟ್ ಡೇ ಚಿತ್ರ ನೋಡಿದ ಕೆಲವರು ಈ ಚಿತ್ರ ಸೋಲುತ್ತೆ ಎಂದಿದ್ದು, ಕೊನೆಗೆ ಎಲ್ಲವನ್ನು ಮೀರಿ ಸಿನಿಮಾ ನೂರು ದಿನ ಓಡಿದ್ದು, ಹೀಗೆ 'ಚೌಕ' ಚಿತ್ರದ ಅಂತರಂಗವನ್ನು ಹೇಳಿಕೊಂಡಿದ್ದಾರೆ. 

Edited By

Aruna r

Reported By

Aruna r

Comments