ಜೋಗಿ ಪ್ರೇಮ್ 'ಪರಸಂಗ' ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ...!!

29 Jun 2018 3:53 PM | Entertainment
457 Report

'ಎಕ್ಸ್‌ಕ್ಯೂಸ್ ಮಿ', 'ಜೋಗಿ' ಚಿತ್ರದ ಜೋಗಿ ಪ್ರೇಮ್ ತಾಯಿಯ ನೋವಿನ ಸನ್ನಿವೇಶಗಳಿಗೆ ಜೀವ ಕೊಟ್ಟು ಯಶಸ್ಸು ಗಳಿಸಿದ ನಿರ್ದೇಶಕ. ಆದರೆ ಇದೀಗ ವ್ಯಕ್ತಿಯೋಬ್ಬರ ಸಾವಿನ ನೋವಿಗೆ ಧ್ವನಿಯಾಗಿ ಮಾನವೀಯತೆಯನ್ನು ಮೆರೆದಿದ್ದಾರೆ. ಹೌದು ಜೋಗಿ ಪ್ರೇಮ್ ಕನ್ನಡದ 'ಪರಸಂಗ' ಚಿತ್ರದ ಹಾಡೊಂದನ್ನು ಹಾಡಿದ್ದು, ಈ ಹಾಡು ಸೂಪರ್ ಹಿಟ್ ಆಗಿದೆ. ಆದ್ರೆ ಈ ಹಾಡು ಹುಟ್ಟಿದ ಪರಿಸ್ಥಿತಿ ಮಾತ್ರ ಒಂದು ಸಾವಿನ ಹಿಂದಿನ ನೋವಿನ ಕ್ಷಣದಲ್ಲಿ ಅನ್ನೋದು ತುಂಬ ಜನರಿಗೆ ಗೊತ್ತಿಲ್ಲ.

ಹೌದು...., ಈ ಹಾಡನ್ನು ಬರೆದವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕರಾದ, ಪ್ರಾಧ್ಯಾಪಕರಾಗಿರುವ ಡಾ.ಎನ್.ಕೆ.ಲೋಲಾಕ್ಷಿ. ಲೋಲಾಕ್ಷಿಯವರ ಅಕ್ಕನ ಮಗಳಾದ ಭಾವನ 2007ರಲ್ಲಿ ಮೃತಪಟ್ಟಿದ್ದರು. ಮನೆಯಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಸರ್ ಎಲೆಕ್ಟ್ರಿಕ್ ಶಾಕ್‌ ಹೊಡೆದು ಸ್ಥಳದಲ್ಲೆ ಸಾವನ್ನಪಿದ್ದರು. ಲೋಲಾಕ್ಷಿಯವರು ಭಾವನರನ್ನು ತನ್ನ ಮಗಳಂತೆ ಹಚ್ಚಿಕೊಂಡಿದ್ದ ಕಾರಣ ಅವರು ಸಾವಿನ ನೋವಿನಿಂದ ಹೊರಬಂದಿರಲಿಲ್ಲ. ಭಾವನಳ ನೆನಪು ಪದೆ ಪದೆ ಕಾಡುತ್ತಿದ್ದರಿಂದ ಲೋಲಾಕ್ಷಿಯವರು ಖಿನ್ನತೆಗೆ ಒಳಗಾದರು. ಈ ಸನ್ನಿವೇಶದಲ್ಲಿ ಲೋಲಾಕ್ಷಿಯವರು ಭಾವನಳ ನೆನಪಿನಲ್ಲೆ ಪದ್ಯಗಳನ್ನು ಬರೆಯಲು ಆರಂಭಿಸಿದರು. 

ಲೋಲಾಕ್ಷಿಯವರು ಭಾವನ ವಿಧಿವಶರಾದ 5 ವರ್ಷಗಳ ನಂತರ ಅವರ ಹೆಸರಿನಲ್ಲಿ ಸಿಡಿಯೊಂದನ್ನು ಬಿಡುಗಡೆ ಮಾಡಿದರು. ಅದರಲ್ಲಿ ಐದಾರು ವರ್ಷಗಳಿಂದ ಭಾವಗೀತೆಯಾಗಿಯೇ ಉಳಿದಿದ್ದ 'ಮರಳಿ ಬಾರದ ಊರಿಗೆ' ಎಂಬ ಭಾವಗೀತೆ ಸಾಕಷ್ಟು ಖ್ಯಾತಿ ಗಳಿಸಿತು. ಇದೀಗ ಈ ಹಾಡು ಚಿತ್ರಗೀತೆಯಾಗಿದ್ದು 'ಪರಸಂಗ' ಎಂಬ ಚಿತ್ರದಲ್ಲಿ ಭಾವನಾತ್ಮಕ ರೂಪ ಪಡೆದುಕೊಂಡಿದೆ.‌ 'ಪರಸಂಗ' ಚಿತ್ರಕ್ಕೆ ವಿಶೇಷವಾಗಿ ಬಳಕೆಯಾಗುತ್ತಿರುವ ಈ ಭಾವಗೀತೆಯ ಹಾಡಿಗೆ ಜೋಗಿ ಪ್ರೇಮ್ ಧ್ವನಿಯಾಗಿದ್ದು ಪ್ರೇಮ್ ಹಾಡಿರುವ ಈ ಹಾಡು ಸಖತ್ ಹಿಟ್ ಆಗಿದೆ. ಭಾವನ ಹೆಸರಿನ ಭಾವನೆಗಳ ನೆನಪಿನಲ್ಲಿ ಹುಟ್ಟಿದ ಹಾಡಿಗೆ ಭಾವದಿಂದಲೇ ಧ್ವನಿಗೂಡಿಸಿರುವ ಪ್ರೇಮ್ ಸಹ ಈ ಗೀತೆಯ ಸಾಹಿತ್ಯವನ್ನ ಮೆಚ್ಚಿಕೊಂಡಿದ್ದಾರೆ. 

Edited By

Aruna r

Reported By

Aruna r

Comments