ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!!

28 Jun 2018 5:18 PM | Entertainment
392 Report

ಕ್ರೇಜಿಸ್ಟಾರ್ ರವಿಚಂದ್ರನ್ ತಾವೇ ನಿರ್ದೇಶನ ಮಾಡಿ, ಅಭಿನಯಿಸುತ್ತಿರುವ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ, ಮತ್ತೊಂದು ಹೊಸ ಸಿನಿಮಾವನ್ನ ಕೈಗೆತ್ತಿಕೊಳ್ಳುತ್ತಿದ್ದು, ಇದು ಥ್ರಿಲ್ಲರ್ ಕಥೆಯಾಗಿರುವುದು ವಿಶೇಷ.

ಈ ಹಿಂದೆ 'ಜಿಗರ್ ಥಂಡಾ' ಚಿತ್ರದ ಮೂಲಕ ನಿರ್ದೇಶಕರಾದ ಶಿವಗಣೇಶ್ ಎರಡನೇ ಸಿನಿಮಾ ಆರಂಭಿಸಿದ್ದು, ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ನಟಿಸಲಿದ್ದಾರೆ. ಈ ಚಿತ್ರವನ್ನ ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕೆ ಮಂಜು ಮಗ ನಟಿಸುತ್ತಿರುವ 'ಪಡ್ಡೆಹುಲಿ' ಚಿತ್ರದಲ್ಲಿ ರವಿಮಾಮಾ ಅಭಿನಯಿಸುತ್ತಿದ್ದಾರೆ. ಅದರೆ ಜೊತೆ ಮಂಜು ನಿರ್ಮಾಣದಲ್ಲಿ ಸೆಟ್ಟೇರಲಿರುವ ಚಿತ್ರದಲ್ಲೂ ಕ್ರೇಜಿಸ್ಟಾರ್ ಬಣ್ಣ ಹಚ್ಚುತ್ತಿದ್ದಾರೆ.

Edited By

Shruthi G

Reported By

Shruthi G

Comments