ಹಿಂದಿಯ ಇಂಡಿಯನ್ ಬೆಸ್ಟ್ ಡ್ರಾಮೇಬಾಜ್ ಕಾರ್ಯಕ್ರಮಕ್ಕೆ ಚಿತ್ರಾಲಿ ಆಯ್ಕೆ

22 Jun 2018 11:41 AM | Entertainment
660 Report

ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ  ಜನಪ್ರಿಯ ಕಾರ್ಯಕ್ರಮವಾದ  ಡ್ರಾಮಾ ಜೂನಿಯರ್ ಮೊದಲ ಸೀಸನ್ ನ ವಿನ್ನರ್ ಆಗಿದ್ದಂತಹ ಚಿತ್ರಾಲಿ ಹಿಂದಿಯ ದೊಡ್ಡ ಜನಪ್ರಿಯ ಕಾರ್ಯಕ್ರಮವೊಂದಕ್ಕೆ ಆಯ್ಕೆಯಾಗಿದ್ದಾಳೆ.

ಮೇ. 8 ರಂದು ಹಿಂದಿಯ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಇಂಡಿಯನ್ ಬೆಸ್ಟ್ ಡ್ರಾಮೇಬಾಜ್ ಸೀಸನ್ 3 ನ ಆಡಿಷನ್ ನಡೆದಿತ್ತು. ಆ ಆಡಿಷನ್ ನಲ್ಲಿ ಚಿತ್ರಾಲಿಯ ಅಭಿನಯ ನೋಡಿ ತೀರ್ಪುಗಾರರಾದ ನಟಿ ಸೋನಾಲಿ ಬೇಂದ್ರೆ, ಅನುರಾಗ್ ಬಸು ಹಾಗೂ ವಿವೇಕ್ ಒಬೆರಾಯ್ ಫಿದಾ ಆಗಿದ್ರು. ಈಗ ಆ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಮೂಲಕ ಹಿಂದಿಯಲ್ಲಿ ಕಾಲಿಟ್ಟಿದ್ದಾಳೆ. ಚಿತ್ರಾಲಿ ಡ್ರಾಮಾ ಜೂನಿಯರ್ ಆದ ಮೇಲೆ ಸುದೀಪ್ ನಿರ್ಮಾಣದ ವಾರಸ್ದಾರ ಧಾರವಾಹಿಯ ಲೀಡ್ ರೋಲ್ ನಲ್ಲಿ ನಟಿಸಿ ಎಲ್ಲರ ಮನೆ ಮಾತಾಗಿದ್ದಳು.

Edited By

Manjula M

Reported By

Manjula M

Comments