2020ಕ್ಕೆ ಈ ಬಾಲಿವುಡ್  ಜೋಡಿಯ ವಿವಾಹವಂತೆ..!

20 Jun 2018 5:56 PM | Entertainment
457 Report

ಬಾಲಿವುಡ್ ನ ಚಿತ್ರ ನಿರ್ದೇಶಕ ಆಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್‌ನಲ್ಲಿ ಆರಂಭವಾಗಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಲವ್ ಸ್ಟೋರಿ ವಿವಾಹದ ಹಂತವನ್ನು ತಲುಪಿದೆ.

ಶೀಘ್ರದಲ್ಲಿಯೇ ಇಬ್ಬರು ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವು  2020ರಲ್ಲಿ ನಡೆಯಲಿದ್ದು, ಇಬ್ಬರು ಸಮ್ಮತಿ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿಯನ್ನು ಮಾಡಿವೆ. ಆಲಿಯಾ ಭಟ್ ಇದೀಗ ಭರ್ಜರಿ ಸ್ವಿಂಗ್‌ನಲ್ಲಿದ್ದು ಯಶಸ್ವಿನ ತುತ್ತ ತುದಿಗೆ ತಲುಪಿದ್ದಾರೆ. ಆಲಿಯಾ ಮತ್ತು ರಣಬೀರ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ, 2020ರ ವರೆಗೆ ವಿವಾಹ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments