ಹ್ಯಾಟ್ರಿಕ್ ಹೀರೋ ಅಭಿಮಾನಿಗಳಲ್ಲಿ ಕ್ರಿಯೆಟ್ ಆಯ್ತು 'ದ್ರೋಣ' ಟ್ರೆಂಡ್

13 Jun 2018 5:44 PM | Entertainment
245 Report

ಸ್ಯಾಂಡಲ್ ವುಡ್ ನಲ್ಲಿ ನಟ ಶಿವರಾಜ್ ಕುಮಾರ್ ಅಂದರೆ ಸಾಕು ಎಲ್ಲರಿಗೂ ಕೂಡ ಸಿಕ್ಕಾಪಟ್ಟೆ ಇಷ್ಟ. ಇದೀಗ ಅವರ  ಹೊಸ ಸಿನಿಮಾ 'ದ್ರೋಣ' ಚಿತ್ರದ ಫೋಟೋ ಶೂಟ್ ಮುಗಿದಿದ್ದು, ಅದರ ಕೆಲವು ಫೋಟೋಗಳು ನಿನ್ನೆಯಷ್ಟೆ ಬಿಡುಗಡೆಯಾಗಿತ್ತು. ಆದರೆ ಈಗ ಆ ಫೋಟೋಗಳ ಮೂಲಕ ಹೊಸ ಟ್ರೆಂಡ್ ಕೂಡ ಶುರುವಾಗಿದೆ.

ಶಿವಣ್ಣ ಈ ಚಿತ್ರದ ಒಂದು ಫೋಟೋದಲ್ಲಿ ಪೆನ್ ಅನ್ನು ಬಾಯಿಯಲ್ಲಿ ಇಟ್ಟುಕೊಂಡು ಸಖತ್ ಆಗಿರೋ ಪೋಸ್ ನೀಡಿದ್ದಾರೆ. ಆದರೆ ಈಗ ಅಭಿಮಾನಿಗಳು ಸಹ  ಶಿವಣ್ಣನ ರೀತಿ ಪೆನ್ ಇಟ್ಟುಕೊಂಡು ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಫೋಟೋಗಳ ಟ್ರೆಂಡ್ ಶುರುವಾಗಿ ಬಿಟ್ಟಿದೆ. ಈ ಹಿಂದೆ 'ಕಿಲ್ಲಿಂಗ್ ವೀರಪ್ಪನ್' ಹಾಗೂ 'ಟಗರು' ಚಿತ್ರದ ಲುಕ್ ಗಳು ಕೂಡ ದೊಡ್ಡ ಮಟ್ಟದಲ್ಲಿ ಸಖತ್ ಕ್ರೇಜ್ ಹುಟ್ಟಿಸಿತ್ತು.ಇದೀಗ ದ್ರೋಣ ಚಿತ್ರದ ಪೋಸ್ ಅಭಿಮಾನಿಗಳು ಆಕರ್ಷಿಸುತ್ತಿದೆ.

Edited By

Manjula M

Reported By

Manjula M

Comments