ಕನ್ನಡ ಚಿತ್ರರಂಗಕ್ಕೆ ಅಭಿನಯ ಚಕ್ರವರ್ತಿ ಹಾಕಿರುವ ಸವಾಲ್ ಏನ್ ಗೊತ್ತಾ?

12 Jun 2018 6:09 PM | Entertainment
339 Report

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫಿಟ್ನೆಸ್ ಚಾಲೆಂಜ್ ಕುರಿತು ಎಲ್ಲೆಡೆ ವಿಡಿಯೋಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ನಟ ಸುದೀಪ್ ಕೂಡ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದು ಎಲ್ಲರಿಗೂ ತಿಳಿದೆ ಇದೆ.  

ಈ ನಡುವೆ ಸುದೀಪ್ ಸ್ಯಾಂಡಲ್ ವುಡ್ ಗೆ  ಹೊಸ ಸವಾಲನ್ನು ಹಾಕಿದ್ದಾರೆ. ಸುದೀಪ್ `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಸವಾಲನ್ನು ಎಲ್ಲರಿಗೂ ಹಾಕಿದ್ದಾರೆ.. ‘ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಎಂದರೆ ಇಂದಿನ ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಾಕಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ  ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳನ್ನು ಹೋಲಿಸಿದಾಗ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ಟ್ವಿಟರ್ ಅಕೌಂಟ್ ನಲ್ಲಿ ಹಾಕಬೇಕು ಅಂತ ತಿಳಿಸಿದ್ದಾರೆ.

Edited By

Manjula M

Reported By

Manjula M

Comments