ದರ್ಶನ್ ಸಹೋದರಿಯಾಗಿ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಅಮೂಲ್ಯ

12 Jun 2018 2:35 PM | Entertainment
457 Report

ಚೆಲುವಿನಚಿತ್ತಾರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿನಿಪ್ರಿಯರ ಗಮನ ಸೆಳೆದ ನಟಿ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಚಂದನವನದ ಸ್ಟಾರ್ ನಾಯಕಿಯಾಗಿ ಮಿಂಚಿದರು.

ಆದರೆ ಮದುವೆಯ ನಂತರ ನಟಿ ಅಮೂಲ್ಯ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಪಕ್ಕಾ ಆಗಿದೆ. ಹೌದು, ದರ್ಶನ್ ಚಿತ್ರದಲ್ಲಿ ಅಮೂಲ್ಯ ಸಹೋದರಿಯಾಗಿ ನಟಿಸಲಿದ್ದಾರಂತೆ. ದರ್ಶನ್ ತಮಿಳಿನ ವೇದಾಳಂ ಚಿತ್ರದ ರೀಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಅಮೂಲ್ಯ, ದರ್ಶನ್ ಸಹೋದರಿ ಪಾತ್ರ ಮಾಡಲಿದ್ದಾರೆ.

 

Edited By

Manjula M

Reported By

Manjula M

Comments