'ಕಾಲಾ' ಪ್ರದರ್ಶನಕ್ಕೆ ಅಸ್ತು ಅಂದ ಹೈಕೋರ್ಟ್ ..!

05 Jun 2018 5:19 PM | Entertainment
384 Report

ತಮಿಳಿನ  ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ 'ಕಾಲಾ' ಚಿತ್ರ ಬಿಡುಗಡೆಗೆ ಇದೀಗ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ಅನ್ನು ಕೊಟ್ಟಾಗಿದೆ.

ಚಿತ್ರ ನಿರ್ಮಾಪಕರು, ರಾಜ್ಯ ಸರ್ಕಾರಕ್ಕೆ ಚಿತ್ರ ಪ್ರದರ್ಶನ ಬಗೆಗಿನ ಸೂಕ್ತ ವಿವರಗಳನ್ನು ನೀಡಬೇಕು. ನಂತರ ಆಯಾ ಚಿತ್ರಮಂದಿರಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಅಹಿತಕರ ಘಟನೆಯಾಗದಂತೆ ಮುಂಜಾಗ್ರತೆ ವಹಿಸಿ ಎಂದು ಸರಕಾರಕ್ಕೆ ಹೈಕೋರ್ಟ್ ನ ಏಕಸದಸ್ಯ ಪೀಠ ಮಧ್ಯಂತರ ಆದೇಶವನ್ನು ನೀಡಿದೆ. ಕಾಲಾ ಚಿತ್ರ ಬಿಡುಗಡೆಯಾದ ಮೇಲೆ ಇಲ್ಲಿನ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments