ದರ್ಶನ್ ಹೊಂದಿರುವ ಪರಿಸರ ಕಾಳಜಿಗೆ ಹ್ಯಾಟ್ಸಾಫ್ ಹೇಳಲೇಬೇಕು..!

05 Jun 2018 3:19 PM | Entertainment
423 Report

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲೂ ಆತನಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಪ್ರಾಣಿಗಳಿಗಾಗಿಯೇ ಪ್ರತ್ಯೇಕ ಜಾಗವನ್ನು ಮಾಡಿಕೊಂಡು ಅಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದರ್ಶನ್ ಸಾಕುತ್ತಾ ಬಂದಿದ್ದಾರೆ.

ಅಲ್ಲದೆ ಅವುಗಳಿಗಾಗಿಯೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ದರ್ಶನ್ ಅವರಿಗೆ ಪ್ರಾಣಿ ಪಕ್ಷಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಇದೇ ಕಾರಣಕ್ಕಾಗಿ ಅರಣ್ಯ ಇಲಾಖೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರ್ನಾಟಕ ಅರಣ್ಯ ಇಲಾಖೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಈಗಾಗಲೇ ವಿಡಿಯೋ ಶೂಟ್ ಮಾಡಲಾಗಿತ್ತು.ಇಂದು ಪರಿಸರ ದಿನಾಚರಣೆಯಾಗಿರುವುದರಿಂದ  ಪರಿಸರ ದಿನಾಚರಣೆ ಅಂಗವಾಗಿ ಇಂದು ಆ ವಿಡಿಯೋವನ್ನು ಚಾಲೆಂಜಿಂಗ್ ಸ್ಟಾರ್  ದರ್ಶನ್ ಅವರೆ ಬಿಡುಗಡೆ ಮಾಡುತ್ತಿದ್ದಾರೆ . ದರ್ಶನ್ ಪರಿಸರ ಕಾಳಜಿ ಮೆಚ್ಚಲೇಬೇಕು….ಯಾಕಂದ್ರೆ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಬಗೆಯ ಗಿಡಗಳನ್ನು ನೆಡಲು ದರ್ಶನ್ ಅವರು ನಿರ್ಧಾರ ಮಾಡಿದ್ದಾರೆ.

ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಸುಮಾರು 1800 ಈ ವಿವಿಧ ಜಾತಿಯ ಹಾಗೂ ಅಪರೂಪದ ಗಿಡಗಳು ಈ ಫಾರ್ಮ್ ಹೌಸ್ ನಲ್ಲಿ ಬೆಳಸಲಾಗುತ್ತದೆ..  ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಕಾರಣಕ್ಕೆ ದರ್ಶನ್  ಈ ಕೆಲಸ ಮಾಡುತ್ತಿಲ್ಲ. ಅರಣ್ಯ ಇಲಾಖೆಯವರು ದರ್ಶನ್ ಅವರನ್ನು ಸಂಪರ್ಕ ಮಾಡುವ ಮೊದಲೇ ತಮ್ಮ ಫಾರ್ಮ್ ಹೌಸ್ ನಲ್ಲಿ ವಿವಿಧ ರೀತಿಯ ಗಿಡಗಳನ್ನು ನಡೆಸಲು ದರ್ಶನ್ರವರು  ನಿರ್ಧಾರ ಮಾಡಿದ್ದರು. ಏನೆ ಆದರೂ ದರ್ಶನ್ ಅವರ ಪ್ರಾಣಿ ಪ್ರೇಮ,ಪಕ್ಷಿ ಪ್ರೇಮ,ಜೊತೆಗೆ ಪರಿಸರ ಸಂರಕ್ಷಣೆ ಇವೆಲ್ಲವನ್ನು ನೋಡಿದರೆ ದರ್ಶನ್ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು..

Edited By

Manjula M

Reported By

Manjula M

Comments