'ಕೋಟಿಗೊಬ್ಬ 3' ಸುದೀಪ್ ಗಾಗಿ ಬಂದ ಬಿಂಕದ ಸಿಂಗಾರಿ ಯಾರ್ ಗೊತ್ತಾ?  

05 Jun 2018 2:31 PM | Entertainment
483 Report

'ಕೋಟಿಗೊಬ್ಬ 3' ನಟ ಸುದೀಪ್ ಅಭಿನಯದ ಚಿತ್ರ. ಸಿನಿಮಾದ ಶೂಟಿಂಗ್ ಈಗಾಗಲೇ ಶುರು ಆಗಿದೆ. ಚಿತ್ರದ ನಟ, ನಟಿ ಇಲ್ಲದೆ ಚಿತ್ರೀಕರಣ ಶುರು ಮಾಡಿದ್ದ ನಿರ್ದೇಶಕರು ಕೆಲ ಸಣ್ಣ ಪುಟ್ಟ ದೃಶ್ಯಗಳ ಚಿತ್ರಿಕರಣವನ್ನು ಶುರು ಮಾಡಿದ್ದರು. ಆದರೆ, ಇದೀಗ ಈ ಸಿನಿಮಾಗೆ ಒಬ್ಬ ನಾಯಕ ನಟಿ ಸಿಕ್ಕಿದ್ದಾಳಂತೆ.

ಅಭಿನಯ ಚಕ್ರವರ್ತಿಗೆ ಈ ಬಾರಿ ಮತ್ತೊಬ್ಬ ಪರಭಾಷೆಯ ಸ್ಟಾರ್ ನಟಿ ಜೋಡಿಯಾಗಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಮೊದಲ ಬಾರಿಗೆ ಅಮಲಾ ಪೌಲ್ ಕಾಣಿಸಿಕೊಂಡಿದ್ದು, 'ಕೋಟಿಗೊಬ್ಬ 3' ಚಿತ್ರದ ಮೂಲಕ ಸಹ ಮತ್ತೊಬ್ಬ ಮಲೆಯಾಳಂ ನಟಿ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಹು ನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾದಲ್ಲಿ ಸುದೀಪ್ ಗೆ ಜೋಡಿಯಾಗಿರುವುದು ನಟಿ ಮಡೋನ ಸೆಬಾಸ್ಟಿಯನ್.  ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಪರಭಾಷ ಚೆಲುವೆಯ ಎಂಟ್ರಿಯಾಗಿದೆ. ಮಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ನಟಿಸಿರುವ ಮಡೋನ ಸೆಬಾಸ್ಟಿಯನ್ ಇದೀಗ ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾಗೆ ನಾಯಕಿಯಾಗಿದ್ದಾರೆ. ಇದು ಮಡೋನ ಅವರ ಮೊದಲ ಕನ್ನಡ ಸಿನಿಮಾ ಆಗಿದೆ. ಸುದೀಪ್ ಮತ್ತು ಮಡೋನ ಸೆಬಾಸ್ಟಿಯನ್ ಜೋಡಿ ತೆರೆ ಮೇಲೆ ಯಾವ ರೀತಿ ಮೋಡಿ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments