ತೆರೆ ಮೇಲೆ ಮಿಂಚಲು  ರೆಡಿಯಾಗಿದೆ ‘ಅಮ್ಮ ಐ ಲವ್ ಯೂ’..!

02 Jun 2018 12:36 PM | Entertainment
562 Report

ಪುನೀತ್ ರಾಜ್ ಕುಮಾರ್ ಅಭಿನಯದ ಮೌರ್ಯ ಚಿತ್ರದ ಅಮ್ಮ ಐ ಲವ್ ಯು ಚಿತ್ರದ ಸಾಂಗ್ ಅನ್ನು ಎಲ್ಲರೂ ಕೇಳೆ ಇರ್ತೀವಿ…ಆದರೆ ಈಗ ಅಮ್ಮ ಐ ಲವ್ ಯೂ ಚಿತ್ರ ತೆರೆ ಮೇಲೆ ಬರಲು ಸಜ್ಜಾಗಿದೆ.   ಚಿರಂಜೀವಿ ಸರ್ಜಾ ಅಭಿನಯಿಸಿರುವ ಕೆ ಎಂ ಚೈತನ್ಯ ನಿರ್ದೇಶನ ಮಾಡಿರುವ ಸಿನಿಮಾ ಈ ಅಮ್ಮ ಐ ಲವ್ ಯೂ.

ಮದುವೆ ನಂತರ ಚಿರು ಅಭಿನಯದ ಮೊದಲ ಚಿತ್ರ ಇದಾಗಿದೆ. ಹಾಡುಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಅಮ್ಮ ಐ ಲವ್ ಯೂ ಚಿತ್ರ ಇದೇ ತಿಂಗಳು ಬಿಡುಗಡೆ ಆಗಲು ರೆಡಿಯಾಗಿದೆ. ಶೂಟಿಂಗ್ ಕಂಪ್ಲೀಟ್ ಮಾಡಿ ಸೆನ್ಸಾರ್ ಬಾಗಿಲಲ್ಲಿದ್ದ ಅಮ್ಮ ಐ ಲವ್ ಯು ಚಿತ್ರಕ್ಕೆ ಯಾವುದೇ ಕಟ್ಸ್ ಇಲ್ಲದೆ ಯು ಎ ಸರ್ಟಿಫಿಕೇಟ್ ಸಿಕ್ಕಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಅಮ್ಮ ಐ ಲವ್ ಯೂ ಚಿತ್ರ ನಿರ್ಮಾಣ ಆಗಿದೆ. ಅಮ್ಮ ಐ ಲವ್ ಯು ಸಿನಿಮಾ ಜೂನ್ 15 ರಂದು ರಾಜ್ಯಾದಂತ್ಯ ಬಿಡುಗಡೆ ಆಗಲಿದೆ. ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿಬರುತ್ತದೆ ಅನ್ನೋದನ್ನ ಕಾದು ನೋಡಬೇಡಬೇಕು.

Edited By

Manjula M

Reported By

Manjula M

Comments