20 ವರ್ಷಗಳ ಸಂಸಾರಕ್ಕೆ ಫುಲ್ ಸ್ಟಾಪ್ ಇಟ್ಟ  ಬಾಲಿವುಡ್ ನಟ

28 May 2018 6:10 PM | Entertainment
571 Report

ಬಾಲಿವುಡ್ ಪ್ರಸಿದ್ದ ನಟನಾದ ಅರ್ಜುನ್ ರಾಂಪಾಲ್ ತಮ್ಮ ಪತ್ನಿ ಮೆಹರ್ ಜೆಸಿಯಾ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ.

ಈ ಮೂಲಕ ಅರ್ಜುನ್ ಮತ್ತು ಜೆಸಿಯಾ ಅವರ 20 ವರ್ಷಗಳ ದಾಂಪತ್ಯ ಜೀವನ ಇದೀಗ ಅಂತ್ಯಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಅರ್ಜುನ್ ಮತ್ತು ಜೆಸಿಯಾ, ಪರಸ್ಪರ ಒಪ್ಪಿಗೆಯೆ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಈ ದಂಪತಿಗೆ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ವಿವಾಹ ವಿಚ್ಛೇದನಕ್ಕೆ ನಿಖರ ಕಾರಣ ತಿಳಿಸದ ಜೋಡಿ, ತಮ್ಮ 20 ವರ್ಷಗಳ ದಾಂಪತ್ಯ ಜೀವನ ಸುಂದರ ನೆನೆಪುಗಳ ಬುತ್ತಿ ಎಂದು ಬಣ್ಣಿಸಿಕೊಂಡಿದ್ದಾರೆ. ನಾವಿಬ್ಬರು ಬೇರೆಯಾಗಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಜೊತೆ ಜೊತೆಯಾಗಿಯೇ  ನಿಲ್ಲುತ್ತೇವೆ ಎಂದು ಜೆಸಿಯಾ ಹೇಳಿದ್ದಾರೆ.

 

Edited By

Manjula M

Reported By

Manjula M

Comments