ಕೋಹ್ಲಿಯ ಸವಾಲ್ ಸ್ವೀಕರಿಸಿದ ಪ್ರಧಾನಿ ಮೋದಿ..!

24 May 2018 10:43 AM | Entertainment
492 Report

ಕ್ರಿಕೆಟಿಗ ವಿರಾಟ್ ಕೋಹ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲ್ ಹಾಕಿದ್ದಾರೆ.. ಅದು ಅಂತಿಂಥ ಸಾಮಾನ್ಯ ಸವಾಲಲ್ಲ. ಫಿಟ್ನೆಸ್ ಚಾಲೆಂಜ್!ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವರಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ಫಿಟ್ನೆಸ್ ಚಾಲೆಂಜಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ರಾಥೋಡ್ ಅವರ ಈ ಸವಾಲನ್ನು ಸ್ವೀಕರಿಸಿ, ತಮ್ಮ ಫಿಟ್ನೆಸ್ ಗುಟ್ಟನ್ನು ರಿವಿಲ್ ಮಾಡಿ ನನ್ನ ಸವಾಲು ಪ್ರಧಾನಿ ಮೋದಿಯವರಿಗೆ ಎಂದಿದ್ದಾರೆ ಕೊಹ್ಲಿ. "ರಾಜ್ಯವರ್ಧನ್ ರಾಥೋಡ್ ಸರ್ ಅವರ ಚಾಲೆಂಜ್ ಅನ್ನು ನಾನು ಸ್ವೀಕರಿಸಿದ್ದೇನೆ. ನಾನೀಗ ನನ್ನ ಪತ್ನಿ ಅನುಷ್ಕಾ ಶರ್ಮಾ, ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಎಂ ಎಸ್ ಧೋನಿ ಭಾಯಿ ಅವರಿಗೆ ಸವಾಲು ನೀಡುತ್ತೇನೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ  ಪ್ರಧಾನಿ ಮೋದಿ, "ಚಾಲೆಂಜ್ ಸ್ವೀಕರಿಸಿದ್ದೇನೆ ಕೊಹ್ಲಿ, ಕೆಲವೇ ಕ್ಷಣಗಳಲ್ಲಿ ನನ್ನ ಫಿಟ್ನೆಸ್ ಚಾಲೆಂಜ್ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಹಮ್ ಫಿಟ್ ತೋ ಇಂಡಿಯಾ ಫಿಟ್" ಎಂದು ಟ್ವೀಟ್ ಮಾಡಿದ್ದಾರೆ.

Edited By

Manjula M

Reported By

Manjula M

Comments