ಗಂಡನ ಮನೆಗೆ ಹೋಗೋದಿಲ್ವಂತೆ ಈ ಬಾಲಿವುಡ್ ಬೆಡಗಿ

22 May 2018 5:58 PM | Entertainment
531 Report

ಬಾಲಿವುಡ್ ನಟಿ ಸೋನಂ ಕಪೂರ್, ಆನಂದ್ ಅಹುಜಾ ಮದುವೆ ಸುದ್ದಿ ಇನ್ನೂ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಶಾಕಿಂಗ್ ಸುದ್ದಿಯನ್ನು ಹೇಳಿದ್ದಾಳೆ. ಮದುವೆಯಾಗಿ 15 ದಿನ ಕಳೆದಿದ್ದು, ಸದ್ಯ ವೀರ್ ದಿ ವೆಡ್ಡಿಂಗ್ ಚಿತ್ರದ ಪ್ರಚಾರದಲ್ಲಿರುವ ಸೋನಂ ಹನಿಮೂನ್ ಗೆ ಹೋಗುವ ತಯಾರಿಯನ್ನು ನಡೆಸಿದ್ದಾಳೆ ಎನ್ನಲಾಗ್ತಿದೆ. ಈ ಮಧ್ಯೆ ಸೋನಂ ಆಶ್ಚರ್ಯಕಾರಿ ಸಂಗತಿಯನ್ನು ಎಲ್ಲರ ಮುಂದೆ ಇಟ್ಟಿದ್ದಾಳೆ.

ವಾಸ್ತವವಾಗಿ ಸೋನಂ ಪತಿ ಆನಂದ್  ಲಂಡನ್ ನಲ್ಲಿದ್ದಾರೆ. ಆನಂದ್ ಪೋಷಕರು ದೆಹಲಿಯಲ್ಲಿದ್ದಾರೆ. ಮುಂಬೈನಲ್ಲಿ ಆನಂದ್ ಅಹುಜಾ ಅವರ ಫ್ಲಾಟ್ ಒಂದಿದೆ. ಈ ಮೂರರಲ್ಲಿ ಸೋನಂ ಎಲ್ಲಿಗೆ ಹೋಗ್ತಾಳೆ ಎಂಬ ಪ್ರಶ್ನೆ ಎಲ್ಲರನ್ನು ಕೂಡ ಕಾಡಿತ್ತು. ಇದಕ್ಕೆ ಸೋನಂ ಸ್ಪಷ್ಟ ಉತ್ತರ ನೀಡಿದ್ದಾಳೆ. ಸೋನಂ ಕಪೂರ್ ಎಲ್ಲಿಗೂ ಹೋಗುವುದಿಲ್ಲವಂತೆ, ತಂದೆ ಅನಿಲ್ ಕಪೂರ್ ಮನೆಯಲ್ಲಿಯೇ ಸದ್ಯ ಉಳಿಯಲಿದ್ದಾಳಂತೆ. ವೀರ್ ದಿ ವೆಡ್ಡಿಂಗ್ ಬಿಡುಗಡೆ ನಂತ್ರ ಇನ್ನೊಂದು ಚಿತ್ರ ಸೋನಂ ಬಳಿ ಇದೆ. ಅದ್ರ ಶೂಟಿಂಗ್ ಶುರುವಾಗಲಿದೆ. ಸಿಕ್ಕಾಪಟ್ಟೆ ಬ್ಯುಸಿಯಿರುವ ಕಾರಣ ದೆಹಲಿ, ಲಂಡನ್ ಗೆ ಹೋಗಲು ಸಾಧ್ಯವಿಲ್ಲ. ಮುಂಬೈನಲ್ಲಿರುವ ಬಂಗಲೆ ನನ್ನಿಷ್ಟದಂತೆ ರೂಪುಗೊಳ್ಳಲು ಇನ್ನೂ ಒಂದು ವರ್ಷ ಬೇಕು. ಆಮೇಲೆ ನೋಡೋಣ ಎಂದಿದ್ದಾಳೆ ಸೋನಂ ಕಪೂರ್.

 

Edited By

Manjula M

Reported By

Manjula M

Comments