30 ಕೆಜಿ ದೇಹ ಇಳಿಸಿದ ಆಕ್ಷನ್ ಪ್ರಿನ್ಸ್; ಕಾರಣ ಏನ್ ಗೊತ್ತಾ?

10 May 2018 12:18 PM | Entertainment
516 Report

ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಪ್ರಿನ್ಸ್ಅಂತಾನೇ ಫೇಮಸ್ ಆಗಿರುವ ಧ್ರುವ ಸರ್ಜಾ ಅಭಿನಯದ 'ಪೊಗರು' ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರವಾಗಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, 2 ನೇ ಹಂತದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ ಎನ್ನುತ್ತಿದೆ ಚಿತ್ರತಂಡ.

ಸ್ಯಾಂಡಲ್ ವುಡ್ ನಲ್ಲಿ ಒಂದೊಳ್ಳೆ ವಿಭಿನ್ನ ಕಥಾಹಂದರವಿರುವ 'ಪೊಗರು' ಚಿತ್ರದಲ್ಲಿ ಧ್ರುವ ಸರ್ಜಾ 8 ನೇ ತರಗತಿ ವಿದ್ಯಾರ್ಥಿ ಪಾತ್ರಕ್ಕಾಗಿ ಬರೋಬ್ಬರಿ 30 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈ ಭಾಗದ ಮೊದಲ ಹಂತದ ಚಿತ್ರೀಕರಣ ಇದೀಗ ಪೂರ್ಣಗೊಂಡಿದ್ದು, ಮೇ 20 ರಿಂದ 2 ನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದಕ್ಕಾಗಿ ಧ್ರುವಸರ್ಜಾ ಮತ್ತೆ ಹಳೆ ಗೆಟಪ್ ಗೆ ಬರುತ್ತಿದ್ದು, ತೂಕವನ್ನು ಹೆಚ್ಚಿಸಿಕೊಳ್ತಿದ್ದಾರೆ. ಈ ಚಿತ್ರವು ಗಂಗಾಧರ್ ನಿರ್ಮಾಣದಲ್ಲಿ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಶಾನ್ವಿ ಶ್ರೀವಾತ್ಸವ್, ರಶ್ಮಿಕಾ ಮಂದಣ್ಣ ಮೊದಲಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವನ್ನು ನೀಡಿದ್ದಾರೆ.ಈ ಚಿತ್ರ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments