ಬಾಲಿವುಡ್ ನಲ್ಲಿ ನಟಿಸುತ್ತಿರುವ 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್

09 May 2018 6:08 PM | Entertainment
445 Report

ಶ್ರದ್ಧಾ ಶ್ರೀನಾಥ್… 'ಯೂ ಟರ್ನ್' ಬೆಡಗಿ  ಇದೀಗ ಬಾಲಿವುಡ್ ನಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಅವರು ಬಾಲಿವುಡ್ ನ ಮತ್ತೊಂದು ಸಿನಿಮಾದಲ್ಲಿ ಖ್ಯಾತ ನಟನ ಜೊತೆ ನಟಿಸಲಿದ್ದಾರಂತೆ.

'ಯೂ ಟರ್ನ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ  ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅನಂತರ ದಿನಗಳಲ್ಲಿ ಬಾಲಿವುಡ್ ನ ಆಫರ್ ಗಳು ಹುಡುಕಿಕೊಂಡು ಬಂದಿತ್ತು. ಹಾಗೇ ಅವರು ಬಾಲಿವುಡ್ ನ 'ಮಿಲನ್ ಟಾಕೀಸ್'' ಚಿತ್ರದಲ್ಲಿ  ಕೂಡ ನಟಿಸುತ್ತಿದ್ದಾರೆ. ಆದರೆ ಇದೀಗ ಅವರು ಬಾಲಿವುಡ್ ನ ಮತ್ತೊಂದು ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಖಿ ಜೊತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರಂತೆ. ನವಾಜುದ್ದೀನ್ ಸಿದ್ದಿಖಿ ಮತ್ತು ಶ್ರದ್ಧಾ ಕಾಂಬಿನೇಶನ್ ನಲ್ಲಿ ಬರುವ ಈ ಸಿನಿಮಾವನ್ನು ಡಿ.ಆರ್.ಶ್ರೀನಿವಾಸ್ ಎಂಬುವವರು ಈ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾ ಹಿಂದಿ, ಕನ್ನಡದಲ್ಲಿ ಕೂಡ ತೆರೆಗೆ ಬರಲಿದೆಯಂತೆ. ಬಾಲಿವುಡ್ ನಲ್ಲಿ ಶ್ರದ್ದಾ ಶ್ರೀನಾಥ್ ಹೇಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments