ಚಿತ್ರಿಕರಣಕ್ಕೂ ಮುನ್ನವೇ 190 ಕೋಟಿಗೆ ಮಾರಾಟವಾಯ್ತು ಈ ಸಿನಿಮಾ..!

04 May 2018 5:39 PM | Entertainment
667 Report

ಬಾಲಿವುಡ್ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಸಲ್ಮಾನ್ ಮುಂದಿನ ಚಿತ್ರ ರೇಸ್-3 ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ. ಕಾಶ್ಮೀರದ ವೇಳಾಪಟ್ಟಿಯನ್ನು ಸಲ್ಮಾನ್ ಖಾನ್ ಪೂರ್ಣಗೊಳಿಸಿದ್ದಾರೆ.

ಚಿತ್ರ ಬಿಡುಗಡೆಗೂ ಮುನ್ನವೇ ನಿರ್ಮಾಪಕ ರಮೇಶ್ ಟೌರಾನಿ ರೇಸ್ 3 ಚಿತ್ರವನ್ನು  ಮಾರಾಟ ಮಾಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ರೇಸ್-3 ಚಿತ್ರ 190 ಕೋಟಿ ರೂಪಾಯಿಗೆ ಮಾರಾಟವಾಗಿದೆಯಂತೆ. ಎರೋಸ್ ಚಿತ್ರ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿತ್ತು. ನಿರ್ಮಾಪಕ ರಮೇಶ್ ಹಾಗೂ ಸಲ್ಮಾನ್ ಖಾನ್ ಜೊತೆ ಎರೋಸ್ ಮಾತುಕತೆಯನ್ನು ನಡೆಸಿತ್ತು. ಆದರೆ ಬಹಳ ದಿನಗಳ ಮಾತುಕತೆಯ ನಂತರ ಚಿತ್ರವನ್ನು ಮಾರಾಟ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Edited By

Manjula M

Reported By

Manjula M

Comments