ಸದ್ಯದಲ್ಲೇ ತೆರೆಗೆ ಎಂಟ್ರಿ ಕೊಡಲಿದೆ 'ದಿ ವಿಲನ್'

03 May 2018 5:12 PM | Entertainment
545 Report

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರವು ಬಿಡುಗಡೆಯಾಗಿದ್ದು ಫೆಬ್ರವರಿ 23, 2017 ರಂದು ಇದನ್ನ ನೋಡಿದರೆ ಸುದೀಪ್ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಯಾಗದೆ ಬರೋಬ್ಬರಿ ಒಂದು ವರ್ಷ ಎರಡು ತಿಂಗಳು ಕಳೆದು ಹೋಗಿದೆ..

ಕೆಲವು ತಿಂಗಳುಗಳ ಕಾಲ ಸುದೀಪ್ ಚಿತ್ರ ಬಿಡುಗಡೆಯಾಗುವ ಲಕ್ಷಣವಿಲ್ಲ. ಹಾಗಾಗಿ ಸುದೀಪ್ ಅಭಿಮಾನಿಗಳು ಸ್ವಲ್ಪ ಬೇಸರದಲ್ಲಿರಬಹುದು. ಈ ಮಧ್ಯೆ ಭರ್ಜರಿಯಾಗಿ ಶುರು ಮಾಡಿದ 'ದಿ ವಿಲನ್' ತಡವಾಗುತ್ತಲೇ ಇದೆ. ನಿರ್ದೇಶಕ ಪ್ರೇಮ್ ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತೇವೆ ಅಂತ ಹೇಳುತ್ತಲೇ ಇದ್ದಾರೆ. ಆದರೆ ಆ ಮಾತಿನ ಮೇಲೆ ನಂಬಿಕೆ ಇಲ್ಲದವರಿಗೆ ನಂಬಿಕೆ ಹುಟ್ಟಿಸುವ ಸಂಗತಿಯೊಂದು ಜರುಗಿ ಹೋಗಿದೆ. ಅದು 'ದಿ ವಿಲನ್' ಚಿತ್ರದ ಡಬ್ಬಿಂಗ್. ಈಗಾಗಲೇ 'ದಿ ವಿಲನ್' ಚಿತ್ರದ ಡಬ್ಬಿಂಗ್ ಶುರುವಾಗಿದೆಯಂತೆ. ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಆಕಾಶ್ ಆಡಿಯೋದಲ್ಲಿ ನಿರ್ದೇಶಕ ಪ್ರೇಮ್ ಡಬ್ಬಿಂಗ್ ಕೆಲಸ ಮಾಡಿದ್ದಾರಂತೆ. ಡಬ್ಬಿಂಗ್‌ನಲ್ಲಿ ಸುದೀಪ್ ಪಾಲ್ಗೊಂಡಿದ್ದಾರೆ. ಸ್ವಲ್ಪ ದಿವಸಗಳಲ್ಲಿ ಡಬ್ಬಿಂಗ್ ಮುಗಿಸಲು ಚಿತ್ರ ತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನುತ್ತಿದ್ದಾರೆ.. ಅಂದು ಕೊಂಡಂತೆ  ಎಲ್ಲಾ ಮುಗಿದರೆ ಆದಷ್ಟು ಬೇಗ ದಿ ವಿಲನ್ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.

 

Edited By

Manjula M

Reported By

Manjula M

Comments