ಇಷ್ಟಕ್ಕೂ ನಟ ಪ್ರಭಾಸ್ ಧನ್ಯವಾದ ತಿಳಿಸಿದ್ದು ಯಾಕೆ ಗೊತ್ತಾ?

01 May 2018 10:54 AM | Entertainment
727 Report

ಕಳೆದ ವರ್ಷ ಏಪ್ರಿಲ್ 28 ರಂದು ಬಿಡುಗಡೆಗೊಂಡ ಭಾರತೀಯ ಚಿತ್ರರಂಗದ ಸೂಪರ್ ಡೂಪರ್ ಹಿಟ್ ಸಿನಿಮಾ ಎನಿಸಿಕೊಂಡ ಬಾಹುಬಲಿ 2 ಚಿತ್ರ ಇದೀಗ ಬಿಡುಗಡೆಯಾಗಿ 2 ವರ್ಷ ಪೂರ್ಣಗೊಂಡಿದೆ.

ಇದರ ಬಗ್ಗೆ ನಟ ಪ್ರಭಾಸ್ ಅಭಿಮಾನಿಗಳಿಗೆ ಫೇಸ್‍ಬುಕ್ ನಲ್ಲಿಯೇ ಧನ್ಯವಾದ ತಿಳಿಸಿದ್ದಾರೆ. ಅಂದು ಬಿಡುಗಡೆಯಾಗಿದ್ದ ಬಾಹುಬಲಿ-2 ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ್ಯಾಂತ ಉತ್ತಮ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಾಣವನ್ನು ಕೂಡ ಮಾಡಿತ್ತು.ಈ ವಿಷಯವಾಗಿ ನಟ ಪ್ರಭಾಸ್ ಅವರು ಸಿಕ್ಕಾಪಟ್ಟೆ ಸಂತಸವನ್ನು ವ್ಯಕ್ತಪಡಿಸಿದ್ದು, "ಬಾಹುಬಲಿ ಚಿತ್ರ ಜರ್ನಿ ತನ್ನ ಜೀವನದಲ್ಲಿ ಅತ್ಯಂತ ಭಾವನಾತ್ಮಕವಾದದ್ದು. ಈ ಚಿತ್ರ ನೀಡಿದ ನಿರ್ದೇಶಕ ರಾಜಮೌಳಿ, ಚಿತ್ರ ತಂಡ ಹಾಗೂ ಯಶ್ವಸಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ" ಎಂದು ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments