ರಾತ್ರೋರಾತ್ರಿ ಬಂದ ಕಾಲ್ ನಿಂದ ಅಪ್ಪು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಡಿಂಪಲ್ ಕ್ವೀನ್.!

30 Apr 2018 4:11 PM | Entertainment
851 Report

ಸ್ಯಾಂಡಲ್ ವುಡ್ ನಲ್ಲಿ ಡಿಂಪಲ್ ಕ್ವೀನ್ ಅಂದ್ರೆ ಎಲ್ಲರಿಗೂ ತಕ್ಷಣವೇ ನೆನಪಾಗೋದು ರಚಿತಾರಾಮ್. 'ಬುಲ್ ಬುಲ್', 'ರನ್ನ', 'ರಥಾವರ', 'ಚಕ್ರವ್ಯೂಹ', 'ಭರ್ಜರಿ' ಅಂತಹ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು  ನೀಡುತ್ತಲೇ ಬಂದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ 'ಅಯೋಗ್ಯ', 'ಉಪ್ಪಿ ರುಪಿ', 'ಸೀತಾ ರಾಮ ಕಲ್ಯಾಣ' ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.

ಇಷ್ಟು ಚಿತ್ರಗಳ ನಡುವೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರಕ್ಕೂ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಷ್ಟಕ್ಕೂ, 'ನಟ ಸಾರ್ವಭೌಮ' ಚಿತ್ರದ ಹೀರೋಯಿನ್ ಪಾತ್ರಕ್ಕೆ ರಚಿತಾ ರಾಮ್ ಗೂ ಮುಂಚೆ ಮಹಾರಾಷ್ಟ್ರದ ಹುಡುಗಿ ಪ್ರಿಯಾಂಕಾ ಜ್ವಾಲಕರ್ 'ನಟ ಸಾರ್ವಭೌಮ' ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆ ಆಗಿದ್ದರು. ಆದ್ರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಪ್ರಿಯಾಂಕಾ ರನ್ನ ಕೈಬಿಟ್ಟು, ಆ ಜಾಗಕ್ಕೆ ರಚಿತಾ ರನ್ನ ಕರೆತರಲಾಗಿದೆಯಂತೆ . 'ನಟ ಸಾರ್ವಭೌಮ' ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಗೆ ಕರೆ ಬಂದಿದ್ದು ರಾತ್ರೋರಾತ್ರಿಯಂತೆ. ಒಂದೆ ಪೋನ್ ಗೆ ಚಿತ್ರದಲ್ಲಿ ನಟಿಸಲು ರಚಿತಾ ಒಪ್ಪಿಕೊಂಡಿದ್ದಾರಂತೆ.



 

Edited By

Manjula M

Reported By

Manjula M

Comments