ಅಕ್ಷಯ್ ಕುಮಾರ್ ಸಮವಸ್ತ್ರದ ಹರಾಜು ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

28 Apr 2018 12:57 PM | Entertainment
462 Report

ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಾರಿಟಿ ಎಲ್ಲ ರೀತಿಯ ಸಹಾಯಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಎನ್ ಜಿ ಓ ಸಹಾಯಕ್ಕೆ ಮುಂದಾಗಿರುವ ಅಕ್ಷಯ್ ಕುಮಾರ್  ಹೊಸ ಮಾರ್ಗವೊಂದನ್ನು ಕಂಡು ಕೊಂಡಿದ್ದಾರೆ.  ರುಸ್ತಮ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಕಿಕೊಂಡಿದ್ದ ಸಮವಸ್ತ್ರವನ್ನು ಹರಾಜಿಗೆ ಇಡಲಾಗಿದೆ.

ರುಸ್ತಮ್ ಚಿತ್ರದಲ್ಲಿ ನೌಕಾ ಅಧಿಕಾರಿಯಾಗಿದ್ದ ಅಕ್ಷಯ್ ಆ ಚಿತ್ರದಲ್ಲಿ ಧರಿಸಿದ್ದ ಸಮವಸ್ತ್ರವನ್ನು ಆನ್ಲೈನ್ ಮೂಲಕ ಹರಾಜಿಗೆ ಇಟ್ಟಿದ್ದಾರೆ.. ಹರಾಜಿನಲ್ಲಿ ಬಂದ ಹಣವನ್ನು ಪ್ರಾಣಿಗಳ ರಕ್ಷಣೆಗೆ ಕೆಲಸ ಮಾಡ್ತಿರುವ ಎನ್ ಜಿ ಓ ಗೆ ನೀಡಲಿದ್ದಾರೆ. ಹರಾಜಿನ ಆರಂಭಿಕ ಬೆಲೆ 20 ಸಾವಿರ ರೂಪಾಯಿಯಾಗಿದೆ. 24 ಗಂಟೆಯಲ್ಲಿ ಈ ಸಮವಸ್ತ್ರದ ಬೆಲೆ 2.5 ಕೋಟಿ ರೂಪಾಯಿಗೆ ಬಂದು ನಿಂತಿದೆ. ಏಪ್ರಿಲ್ 26ರಿಂದ ಹರಾಜು ಶುರುವಾಗಿದ್ದು ಮೇ 26 ರವರೆಗೆ ಹರಾಜು ನಡೆಯಲಿದೆ ಎಂದು ಟ್ವೀಟರ್ ಮೂಲಕ ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments