ಡಿಗ್ರಿ ಪಡೆದ ಈ ನಟಿ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ..!

27 Apr 2018 4:49 PM | Entertainment
532 Report

ಸ್ಯಾಂಡಲ್ ವುಡ್ ನಲ್ಲಿ  ಆಶಿಕಾ ರಂಗನಾಥ್ ಒಂದರ ನಂತರ ಮತ್ತೊಂದರಂತೆ ಒಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಆಶಿಕಾ ಇದೀಗ ಬರಿ ಹಿರೋಹಿನ್ ಮಾತ್ರ ಅಲ್ಲ ಪದವೀದರೆ ಆಗಿದ್ದಾರೆ.

ಬೆಂಗಳೂರಿನ ಮಲೇಶ್ವರಂನಲ್ಲಿರುವ ಎಂಇಎಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಆಶಿಕಾ ಮೂರು ವರ್ಷವನ್ನು ಮುಗಿಸಿ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ.. ಸಿನಿಮಾದ ಜೊತೆಗೆ ಈಗ ಓದಿನಲ್ಲಿಯೂ ಕೂಡ ಮುಂದಿದ್ದಾರೆ. ಸಿನಿಮಾ ಮತ್ತು ಓದು ಎರಡು ಇರುವುದರಿಂದ ಟೈಂ ಹೇಗೆ ಹೋಯ್ತು ಅಂತನೇ ಗೊತ್ತಾಗಲಿಲ್ಲ. ಆದರೆ ಎಕ್ಸಾಂ ಮತ್ತು ಇಂಟರ್ನಲ್ಸ್ ಇರುವಾಗ ಎರಡನ್ನು ಮ್ಯಾನೆಜ್ ಮಾಡುವುದು ಕಷ್ಟ ಆಯ್ತು ಎಂದು ಹೇಳಿಕೊಂಡಿದ್ದಾರೆ.. ಮುಂದೆ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಜೊತೆಗೆ ಎಂ ಬಿ ಎ ಮಾಡುವ ಪ್ಲಾನ್ ಇದೆ ಎಂದಿದ್ದಾರೆ. ಪಿ ಯು ಸಿ ಮುಗಿದ ನಂತರ 'ಕ್ರೇಜಿ ಬಾಯ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್ ಈಗ ಬೇಡಿಕೆಯ ನಟಿ ಆಗಿದ್ದಾರೆ. 'ಮುಗುಳುನಗೆ', 'ರಾಜು ಕನ್ನಡ ಮೀಡಿಯಂ' ಚಿತ್ರಗಳ ನಂತರ ಈಗ 'ರಾಂಬೋ 2' ಸಿನಿಮಾದಲ್ಲಿ ಆಶಿಕಾ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.

Edited By

Manjula M

Reported By

Manjula M

Comments