ವೈರಲ್ ಆಯ್ತು ಕಿಚ್ಚ ಸುದೀಪ್ ನ್ಯೂಲುಕ್..!

26 Apr 2018 11:36 AM | Entertainment
588 Report

 ಕಿಚ್ಚ ಸುದೀಪ್ ಅವರು ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕ ಮತ್ತು ಹೇರ್ ಸ್ಟೈಲ್ ಬದಲಿಸೋದು ಹೊಸದೇನಲ್ಲಾ..

ಇದೀಗ ಸುದೀಪ್ ಅವರು ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕಾಗಿ ಬರೋಬ್ಬರಿ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಸುದೀಪ್ ಮತ್ತು ಶ್ರುತಿ ಹರಿಹರನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣವು ಭರದಿಂದ ಸಾಗುತ್ತಿದೆ ಸುದೀಪ್ ಹಾಗೂ ಶ್ರುತಿ ರೆಟ್ರೋ ಲುಕ್ ನಲ್ಲಿ ಮಿಂಚಿರುವ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗಿವೆ. ಈ ಚಿತ್ರದಲ್ಲಿ ಜೂ. ಅಂಬರೀಶ್ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸಿನಿ ರಸಿಕರು ತೆರೆ ಮೇಲೆ ನೋಡಲು ಮತ್ತಷ್ಟು ದಿನ ಕಾಯಲೇಬೇಕು.

Edited By

Manjula M

Reported By

Manjula M

Comments