ಭಾವಿ ಪತ್ನಿಗೆ ಚಿರು ಹೇಳಿದ್ದು ಏನು ಗೊತ್ತಾ?

24 Apr 2018 3:55 PM | Entertainment
595 Report

ಬಣ್ಣದ ಲೋಕದಲ್ಲಿ ಈಗ ಮದುವೆಯ ಸಂಭ್ರಮ.. ಮೇ 2 ರಂದು ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್ ಕಲ್ಯಾಣ ನಡೆಯುತ್ತಿದೆ. ಈಗಾಗಲೇ ಮದುವೆಯ ಸಖಲ ಸಿದ್ದತೆಯು  ನಡೆದಿದ್ದು ಮದುವೆಗೂ ಮುನ್ನ ತನ್ನ ಭಾವಿ ಪತ್ನಿ ಮೇಘನಾ ರಾಜ್ ಅವರ ಬಳಿ ಒಂದು ವಿಚಾರವನ್ನ ಮಾತನಾಡಿದ್ದಾರೆ. ಈ ವಿಷ್ಯ ಮೇಘನಾಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ  ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆಯಂತೆ

ಮದುವೆ ಆದ ಮೇಲೆ ಸಾಮಾನ್ಯವಾಗಿ ನಾಯಕಿಯರು ಸಿನಿಮಾರಂಗ ಬಿಟ್ಟು ಮನೆ ಮಕ್ಕಳು ಅಂತ ಬ್ಯುಸಿ ಆಗ್ತಾರೆ.. ಇನ್ನು ದೊಡ್ಡ ಕುಟುಂಬಕ್ಕೆ ಮದುವೆ ಆದರು ಅಂದ್ರೆ ಅವರದ್ದೇ ಆದ ಜವಾಬ್ದಾರಿಗಳು ಇರುತ್ತೆ. ಆದರೆ ಚಿರಂಜೀವಿ ಸರ್ಜಾ ಮಾತ್ರ ಈ ವಿಚಾರದಲ್ಲಿ ಸ್ವಲ್ಪ ಸ್ಪೆಷಲ್ ಆಗಿದ್ದಾರೆ. ಮದುವೆಯ ನಂತರ ನೀನು ಅಭಿನಯಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮದುವೆ ಆದ ಮೇಲೆ ಯಾವುದೇ ರೀತಿಯ ಬದಲಾವಣೆಗಳಿಲ್ಲ. ನಿನ್ನ ವೃತ್ತಿಯನ್ನು ಹೀಗೆ ಮುಂದುವರಿಸು ಎಂದಿದ್ದಾರೆ. ಈ ವಿಚಾರ ಮೇಘನಾ ಫ್ಯಾಮಿಲಿ ಹಾಗೂ ಅಭಿಮಾನಿಗಳಿಗೂ ತುಂಬಾ ಖುಷಿಯಲ್ಲಿದ್ದಾರಂತೆ.

 

Edited By

Manjula M

Reported By

Manjula M

Comments