ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೇ ಡಾ.ರಾಜ್

24 Apr 2018 9:57 AM | Entertainment
555 Report

ಇವರು ಕನ್ನಡ ಚಿತ್ರರಂಗ ಕಂಡ ಅಪ್ಪಟ ಕನ್ನಡದ ಕಣ್ಮಣಿ.. ಅಭಿಮಾನಿಗಳನ್ನೇ ದೇವರೆಂದ ವಿಶಾಲ ಹೃದಯದ ದೇವತಾ ಮನುಷ್ಯ.. ಅಂದಿನಿಂದ ಇಂದಿನವರೆಗೂ ಕನ್ನಡಿಗರ ಮನದಲ್ಲಿ ಅಪ್ಪಾಜಿಯಾಗಿ, ಅಣ್ಣಾವ್ರಾಗಿ, ಧ್ರುವತಾರೆಯಂತೆ ಮಿನುಗುತಿರೋ ಮುತ್ತಿನಂಥ ರಾಜ ಈ ವರನಟ ಡಾ.ರಾಜ್‍ಕುಮಾರ್.ಹೌದು.. ಕನ್ನಡ ಚಿತ್ರರಂಗ ಎಂದಾಕ್ಷಣ ಎಲ್ರಿಗೂ ಫಸ್ಟ್ ನೆನಪಾಗೋದೇ ಡಾ.ರಾಜ್.. ಯಾಕಂದ್ರೆ ಆಡು ಮುಟ್ಟದ ಸೊಪ್ಪಿಲ್ಲ ಡಾ.ರಾಜ್ ಮಾಡದ ಪಾತ್ರವಿಲ್ಲ.. ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಎಲ್ಲರ ಅಚ್ಚುಮೆಚ್ಚಿನ ನಟನಾದವ್ರು  ರಾಜಣ್ಣನವ್ರು.

ರಾಜ್‍ಕುಮಾರ್ ಶಾಲೆಗೆ ಹೋಗಿ ಕಲಿತ್ತಿದ್ದು ಕಡಿಮೆಯಾದರು ಸರಳ ಜೀವನದಲ್ಲಿ ನಡೆಸುವುದರಲ್ಲಿ ಒಬ್ಬ ಶಿಕ್ಷಕರಾಗಿದ್ದರು. ಅವರ ಸರಳ ಜೀವನ, ಅವರಿಗಿದ್ದ ಕನ್ನಡ ಭಾಷಾಭಿಮಾನ ಆದರ್ಶಗಳಿಂದ ಇಂದಗೂ ಅಭಿಮಾನಿಗಳ ಮನದಲ್ಲಿ ಅಣ್ಣಾವ್ರು ಅಚ್ಚಳಿಯದೆ ಉಳಿದಿದ್ದಾರೆ.ಕೆಲವರಲ್ಲಿ ಸೈದ್ದಾಂತಿಕತೆಯ ರೂಪದಲ್ಲಿ ಮತ್ತೆ ಕೆಲವರಲ್ಲಿ ನೈತಿಕತೆಯ ರೂಪದಲ್ಲಿ ಈ ಅಂಶಗಳು ಅನಾವರಣಗೊಳ್ಳುತ್ತವೆ. ತಾವು ನಂಬಿದ ನೈತಿಕತೆಯನ್ನೆ ಸೈದ್ದಾಂತಿಕತೆಯೆಂದು ಭಾವಿಸಿ ಜನರಿಗೆ ಜವಾಬ್ದಾರಿಯಾಗಿ ಬದುಕಿದ ಕಲಾವಿದ ಡಾ. ರಾಜ್‍ಕುಮಾರ್.ಕುವೆಂಪು ನಿಸರ್ಗದಲ್ಲಿ ದೇವರನ್ನು ಕಂಡರು. ರಾಜ್‍ಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಜನರನ್ನು ಅಭಿಮಾನಿ ದೇವರುಗಳೇ ಎಂದು ಸಂಬೋದಿಸುತ್ತಲೇ ಅದನ್ನು ಸತ್ಯವಾಗಿಸಿದರು. ಅವರ ಈ ಸದಭಿರುಚಿಯ ಕಲ್ಪನೆಯಲ್ಲಿ ಸಾಂಪ್ರದಾಯಿಕತೆಯೂ ಇತ್ತು, ಮತ್ತು ಆಧುನಿಕತೆಯೂ ಇತ್ತು.

ಅಣ್ಣಾವ್ರು ಪಾತ್ರದ ಮುಖಾಂತರ ಮಾತಾಡಿದ್ದು ವೆದವಾಕ್ಯವಾಗುತ್ತಿತ್ತು. ಬಂಗಾರದ ಮನುಷ್ಯ ಚಿತ್ರದಲ್ಲಿ ಬಂಗಾರದ ಪಾತ್ರ ಮಾಡಿದರು. ಈ ಚಿತ್ರದಲ್ಲಿನ ರಾಜ್ ಅಭಿನಯದ  ರಾಜೀವಪ್ಪನ ಪಾತ್ರ ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾದರು ಎಷ್ಟೋ ಜನರ ತಮ್ಮ ಬದುಕಿನ ದೃಷ್ಟೀಕೋನವನ್ನೆ ಬದಲಿಸಿಬಿಡ್ತು. ಕೆಲಸ, ನವಜೀವನ ಎಂದು ನಗರಕ್ಕೆ ಗುಳ್ಳೆ ಹೋಗಿದ್ದ ಯುವಕರು ಈ ಚಿತ್ರವನ್ನು ನೋಡಿ ಕೃಷಿಗೆ ಮರಳಿದ್ದು ಇಡೀ ಚಿತ್ರರಂಗದಲ್ಲೇ ಅಚ್ಚಳಿಯದ ಇತಿಹಾಸ. ರಾಜೀವಪ್ಪನಂತೆ ಎಷ್ಟೋ ಜನರು ಮತ್ತೆ ವ್ಯವಸಾಯ ಶುರು ಮಾಡಿ ಜೀವನ ಸಾಗಿಸಿದ್ರು.ಲಕ್ಷಾಂತರ ಜನರ ಜೀವನ ಶೈಲಿಯನ್ನೆ ಬದಲಿಸೋ ಶಕ್ತಿ ಒಂದು ಚಿತ್ರಕ್ಕೆ ಇದೆ ಅಂದರೆ ಎಂತರಿಗೂ ಅಚ್ಚರಿ ಆಗುತ್ತಲ್ವಾ?. ಅಂತ ಶಕ್ತಿ ಇದ್ದದ್ದು ಮಾತ್ರ ಬಂಗಾರದ ಚಿತ್ರಕ್ಕೆ. ಸಾವಿರ ಮೈಲಿಯ ಪಯಣವೂ ಒಂದು ಹೆಜ್ಜೆಯಿಂದಲೇ ಆಗೋದು, ಪ್ರಯತ್ನ ಮಾಡಬೇಕು, ಎದೆಗುಂದಬಾರದು ಅನ್ನೊ ಸಂದೇಶಗಳನ್ನೆಲ್ಲಾ ಅದೇಷ್ಟು ಚೆನ್ನಾಗಿ ರಾಜ್‍ಕುಮಾರ್ ಅಮೋಘ ಅಭಿನಯದ ಮೂಲಕ ಬಂಗಾರದ ಮನುಷ್ಯ ಚಿತ್ರದಲ್ಲಿ ಕಟ್ಟಿಕೊಟ್ಟರು.

ಈ ಸಿನಿಮಾದಲ್ಲಿನ ಪಾತ್ರಗಳು ಹಾಗೂ ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ.... ಈ ಸಾಲುಗಳು ಸಾಕು ಕುಗ್ಗಿದ ಮನಸ್ಸಿಗೆ ಉಮ್ಮಸ್ಸು ನೀಡುತ್ತದೆ. ಬದುಕು ಕಂಡುಕೊಳ್ಳುವ  ದಾರಿ, ಛಲ ಹುಟ್ಟಿಸುತ್ತದೆ. ಈ ಚಿತ್ರದ ವಿಶೇಷತೆ ಅಂದ್ರೆ ಅನೇಕ ರೈತರು ವ್ಯವಸಾಯ ಮಾಡಲು ಆಧುನಿಕ ಯಂತ್ರೋಪಕರಣವನ್ನ ಉಪಯೋಗಿಸಬಹುದು ಎಂಬುದನ್ನ ಕಲಿತು ಕೊಂಡಿದ್ದು. ಹೌದು ಈ ಚಿತ್ರದ ಆಗದು ಎಂದು ಕೈಕಟ್ಟಿ ಕುಳಿತರೆ ಎಂಬ ಹಾಡಿನಲ್ಲಿ ಬಂಡೆ ಕೊರಿಯುವ ಯಂತ್ರೋಪಕರಣ ಸಾಕಷ್ಟು ರೈತರಿಗೆ ಪರಿಚಿಯವಾಯಿತು. ಏನೆ ಬಂದರು ಮುನ್ನಡೆಯುತ್ತೇನೆ ಎನ್ನುವ ಅನ್ನೊ ದೃಡ ಸಂಕಲ್ಪ ಇದ್ರೆ ಎದುರಾಗೊ ಬಂಡೆಗಳೂ ಪುಡಿ ಪುಡಿಯಾಗುತ್ತೆ. ಇಂಥ ಹಾಡುಗಳು ಈಗ್ಲೂ ಪರಿಣಾಮಕಾರಿ ಪ್ರೇರಣೆ ನೀಡ್ತಿರೋದು ಅವುಗಳ ಸಾರ್ಥಕತೆಗೆ ಸಾಕ್ಷಿಯಾಗಿದ್ದು, ಮನಸ್ಸಿದ್ದರೆ ಮಾರ್ಗ ಎಂಬ ತತ್ವದೊಡನೆ ಅನೇಕರಿಗೆ ಬಂಗಾರದ ಮನುಷ್ಯ ಚಿತ್ರ ಸ್ಪೂರ್ತಿಯಾಗಿದ್ದು ಉಂಟು. ದುಡಿಮೆಯ ನಂಬಿ ಬದುಕು ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು.. ಮಣ್ಣು ಮೆತ್ತಿಕೊಂಡ ಕೈಗಳಲ್ಲಿ ನೇಗಿಲು ಹಿಡಿದ ರಾಜೀವನ ಪಾತ್ರದಲ್ಲಿ ಕಾಣಿಸಿಕೊಂಡರು. ಮಣ್ಣನ್ನು ಬಂಗಾರ ಎಂದು ಹೇಳಿ ಬಂಗಾರದ ಮನಷ್ಯರಾದರು.

ವರನಟನ ಅಭಿನಯವೇ ಹಾಗೆ ಅದೊಂದು ಚಮತ್ಕಾರ.. ಅದೊಂದು ಕಾಲವಿತ್ತು ಡಾ. ರಾಜ್‍ಕುಮಾರ್ ಅಭಿನಯದ ಚಿತ್ರಗಳನ್ನು ನೋಡಿ ಅದೇಷ್ಟೂ ಜನರು ಹಳ್ಳಿಗಳಿಗೆ ಮರಳಿ ರೈತರಾಗಿದ್ದರು. ಬಂಗಾರದ ಮನುಷ್ಯ ಕಾಮನಬಿಲ್ಲು, ಒಡಹುಟ್ಟಿದವರು ಸೇರಿದಂತೆ ಹಲವಾರು ಚಿತ್ರಗಳಲ್ಲಿ ರೈತರ ಪಾತ್ರ ಮಾಡಿದ್ದ ರಾಜ್ ಕುಮಾರ್ ಅನ್ನದಾತರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ಆ ಚಿತ್ರಗಳು ಜನ ಸಾಮಾನ್ಯರ ಮೇಲೆ ಎಷ್ಟೋಂದು ಪರಿಣಾಮ ಬೀರಿತೆಂದರೆ ರಾಜ್‍ಕುಮಾರ್ ಅವರ ಪಾತ್ರದ ಅಭಿನಯದಿಂದ ಹಲವಾರು ಮಂದಿ ಹಳ್ಳಿಗಳಿಗೆ ಮರಳಿ ರೈತರಾದ ಉದಾಹರಣೆಗಳಿವೆ.ಇನ್ನೂ ರಾಜ್ ಬಿಡುಗಡೆ ಚಿತ್ರದಲ್ಲಿ ನ್ಯಾಯವಾದಿಯಾಗಿ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಲು ಹೋರಾಡುವ ಪಾತ್ರ ಎಲ್ಲಾರಲ್ಲೂ ಮೆಚ್ಚುಗೆ ವ್ಯಕ್ತಪಡಿಸಿತು. ಈ ಚಿತ್ರದ ನಂತರ ಅನೇಕ ದಿನಗಳವರೆಗೆ ಕೋರ್ಟ್‍ಗಳಲ್ಲಿ ಇದೇ ವಿಚಾರವಾಗಿ ಚರ್ಚೆಯಾಯಿತು. ಇನ್ನೂ ಕಷ್ಟ, ನೋವು ಎಂದು ಕೇಳಿಕೊಂಡು ಬಂದವರಿಗೆಲ್ಲಾ ಕಿಂಚಿಂತು ಯೋಚನೆ ಮಾಡದೆ ತನ್ನ ಸರ್ವಸ್ವವನ್ನೂ ಕೂಡ ಧಾರೆಯೆರೆದ ಕಸ್ತೂರಿ ನಿವಾಸದ ಕೊಡುಗೈ ದೊರೆಯಾದ ನಾಯಕನ ಪಾತ್ರವಂತೂ ಪುಟಕ್ಕಿಟ್ಟ ಚಿನ್ನ. ಈ ಚಿತ್ರದ ಮುಖಾಂತರ ಸಾಹುಕಾರರೆಲ್ಲಾ ಕೂಡಿಟ್ಟ, ಬಚ್ಚಿಟ್ಟ ಆಸ್ತಿ, ಪಾಸ್ತಿ ಹಣವೆನ್ನಲ್ಲಾ ಬಡಬಗ್ಗರಿಗೆ ಹಂಚಿ ಆ ಚಿತ್ರಕ್ಕೆ, ಚಿತ್ರದ ಪಾತ್ರದಾರಿ ಅಣ್ಣಾವ್ರಿಗೆ ಕೃತಜ್ಞತೆ ಸಲ್ಲಿಸಿದರು.

 

Edited By

Manjula M

Reported By

Manjula M

Comments